
ಯಲ್ಲಾಪುರ: ತಾಲೂಕಿನ ದೆಹಳ್ಳಿಯ ದೇವಿ ಸನ್ನಿಧಿಯಲ್ಲಿ ಆಷಾಡ ಏಕಾದಶಿ ನಿಮಿತ್ತ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಭಾಗವಹಿಸಿ ಭಜನೆಯನ್ನು ಭಜಿಸಿದರು.
ಕಲಿಯುಗದಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ದರಿಸುವವು ಎಂಬ ಸುಂದರ ಭಜನೆಯನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದ ಅವರು, ಎದುರಲ್ಲಿ ನೆರೆದ ಭಕ್ತಾದಿಗಳಿಂದ ಶ್ಲಾಘನೆಗೆ ಒಳಗಾದರು.
ಈ ಸಂದರ್ಭದಲ್ಲಿ ದಾಸರಾದ ರಾಮಕೃಷ್ಣ ಕಾಟುಕುಕ್ಕೆ, ಈಶ್ವರ ದಾಸ, ವನವಾಸಿ ಕಲ್ಯಾಣದ ಪ್ರಾಂತ ಹಿತರಕ್ಷ ಪ್ರಮುಖ ದೊಂಡು ಪಾಟೀಲ್, ಗಜಾನನ ಕೊಂಬೆ, ಕೃಷಿ ಪ್ರಯೋಗ ಪರಿವಾರದ ಗಣಪತಿ ಮೆಣಸುಮನೆ,ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಸೇರಿದಂತೆ ಊರಿನ ಹಿರಿಯರು,ಭಕ್ತಾದಿಗಳು ಉಪಸ್ಥಿತರಿದ್ದರು.