
ಶಿರಸಿ: ಯುಗಾದಿ ಹಬ್ಬದ ನಿಮಿತ್ತ ಇಲ್ಲಿಯ ಬನವಾಸಿ ರಸ್ತೆಯಲ್ಲಿರುವ ಅಂಗಡಿಕಾರರು ಕೇಸರಿ ಬಾವುಟ, ಬಂಟಿಂಗ್ಸ್ ಗಳಿಂದ ಅಂಗಡಿ ಮುಂಗಟ್ಟುಗಳನ್ನು ಶೃಂಗರಿಸಿ, ದಣಿದು ಬಂದ ಸಾರ್ವಜನಿಕರಿಗೆ ಮಜ್ಜಿಗೆ ಅರವಟಿಕೆ ಸೇವೆಯನ್ನು ಮಾಡಿದರು.
ಬನವಾಸಿ ರಸ್ತೆಯಲ್ಲಿರುವ ಮಾರಿಕಾಂಬಾ ವೆಜಿಟೇಬಲ್, ಹೆಗಡೆ ಪ್ರುಟ್ಸ್, ನ್ಯೂ ಕ್ಲಾಸಿಕ್ ಮೆನ್ಸ್ ಸಲೂನ್, ಗುಡೇ ಅಂಗಡಿ ಐಸ್ಕ್ರೀಮ್ ಪಾರ್ಲರ್, ಹೊಟೆಲ್ ಚೈತ್ರ, ಮಹಾಲಸಾ ಜ್ಯುವೆಲ್ಲರಿ, ಸಾಯಿ ಎಂಟರ್ ಪ್ರೈಸಸ್, ಗೌತಮಿ ಎಂಟರ್ಪ್ರೈಸಸ್ ಸೇರಿದಂತೆ ಇನ್ನಿತರ ಅಂಗಡಿಗಳ ಮಾಲಕರು, ಕೆಲಸಗಾರರು ಸೇರಿದಂತೆ ಇನ್ನಿತರರು ಈ ಸೇವಾ ಕಾರ್ಯಕ್ಕೆ ಸಹಕಾರ ನೀಡಿದರು.Attachments area