ಶಿರಸಿ: ತಾಲೂಕಿನ ಕೊಪ್ಪೆಸರದಲ್ಲಿ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆಯೊಂದಕ್ಕೆ ಬೆಂಕಿ ಬಿದ್ದು, ಕೊಟ್ಟಿಗೆ ಬಹುತೇಕ ಸುಟ್ಟ ದುರ್ಘಟನೆ ಶುಕ್ರವಾರ ನಡೆದಿದೆ.
ಇಲ್ಲಿಯ ವಿಶ್ವನಾಥ ಹೆಗಡೆ ಎಂಬುವವರಿಗೆ ಸೇರಿದ ಕೊಟ್ಟಿಗೆಯಲ್ಲಿ ವಿದ್ಯುತ್ ಲೈನ್ ಶಾರ್ಟ್ ಆದ ಪರಿಣಾಮ ಬೆಂಕಿ ತಗುಲಿದೆ ಎನ್ನಲಾಗಿದೆ. ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಕೊಟ್ಟಿಗೆಯಲ್ಲಿದ್ದ ಒಣಹುಲ್ಲು ಮತ್ತು ಅಡಿಕೆಗೆ ಬೆಂಕಿ ತಗುಲಿದೆ.
ಅದೃಷ್ಟವಷಾತ್ ಯಾವುದೇ ಜೀವಹಾನಿಯಾಗಿಲ್ಲ. ಕಟ್ಟುವ ಹಂತದಲ್ಲಿದ್ದ ಹೊಸ ಮನೆಗೆ ಬೆಂಕಿ ತಗುಲಿ ಬಹುತೇಕ ಹಾನಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.