ಸಿದ್ದಾಪುರ: ತಾಲೂಕಿನ ಹೇರೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಏ.2 ರಂದು ಮಧ್ಯಾಹ್ನ 3.30 ಕ್ಕೆ ಜರುಗಲಿದೆ.
ಉದ್ಘಾಟಕರಾಗಿ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪಾಲ್ಗೊಳ್ಳಲಿದ್ದು ಧಾರವಾಡ ಒಕ್ಕೂಟದ ನಿರ್ದೇಶಕ ಪರಶುರಾಮ ವಿ.ನಾಯ್ಕ ಅಧ್ಯಕ್ಷತೆವಹಿಸುವರು. ಅಣಲೇಬೈಲ್ ಗ್ರಾಪಂ ಅಧ್ಯಕ್ಷೆ ಮಂಗಲಾ ಎಸ್.ಹೆಗಡೆ, ನೆಲೆಮಾಂವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಬಿ.ಭಟ್ಟ ನೆಲೆಮಾಂವ, ಜಿಪಂ ಮಾಜಿ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ ಕಿಬ್ಬಳ್ಳಿ ಉಪಸ್ಥಿತರಿರುತ್ತಾರೆ.