• Slide
    Slide
    Slide
    previous arrow
    next arrow
  • ಏ. 3 ರಂದು ಹೂಕಾರ ಗ್ರಾಮದೇವತೆಗಳ ವಾರ್ಷಿಕೋತ್ಸವ.

    300x250 AD

    ಸಿದ್ದಾಪುರ: ತಾಲೂಕಿನ ಹೂಕಾರ ಗ್ರಾಮದ ರಕ್ಷಕ ದೇವತೆಗಳಾದ ಮಹಾಗಣಪತಿ,ಚೌಡೇಶ್ವರಿ, ನಾಗದೇವರು,ಚಂಡೇಶ್ವರ ಅಮ್ಮನವರು,ವನದುರ್ಗಾ, ಮಹಾಸತಿ, ಜಟಗೇಶ್ವರ ಮತ್ತು ಕ್ಷೇತ್ರಪಾಲ ಶಕ್ತಿಗಳ ಹದಿಮೂರನೇ ವಾರ್ಷಿಕೋತ್ಸವ ಏ.೩ರಂದು ನಡೆಯಲಿದೆ.

     ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಅನ್ನಪೂರ್ಣೆಶ್ವರಿ ಪೂಜೆ,ಸತ್ಯನಾರಾಯಣ ವ್ರತ ಕಲಶ ಪೂಜೆ,ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ಗೇರುಸೊಪ್ಪಾ ಗ್ರಾಮದ ಶಕ್ತಿದೇವತೆಯಾದ ಮಹತೋಬಾರ ಗುತ್ತಿಕಾ ಪರಮೇಶ್ವರಿ ದೇವಿಯ ಉಪಸ್ಥಿತಿಯಲ್ಲಿ ಜರುಗಲಿದೆ.

    ರಾತ್ರಿ ೮ರಿಂದ ನಡೆಯುವ ಸಾಂಸ್ಕೃತಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಪಿ.ಗೌಡರ್ ಹೂಕಾರ ವಹಿಸುವರು. ತಾಪಂ ಮಾಜಿ ಅಧ್ಯಕ್ಷ ಸುಧೀರ್ ಗೌಡರ್ ಹೆಗ್ಗೋಡಮನೆ,ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ, ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಸೀತಾರಾಮ ಶೆಟ್ಟಿ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಪಿ.ವಿ.ಹೆಗಡೆ ಹೊಸಗದ್ದೆ, ಅಶೋಕ ನಾಯ್ಕ ಹದಿನಾರನೇಮೈಲಕಲ್, ಸತೀಶ ಜಿ.ನಾಯ್ಕ ತರಳಿ ಉಪಸ್ಥಿತಿರುತ್ತಾರೆ.

    ನಂತರ ಶಂಭುಲಿಂಗೇಶ್ವರ ಯಕ್ಷಗಾನ ಮೇಳ ಸಿದ್ದಾಪುರ ಹಾಗೂ ಕಲಾಭಾಸ್ಕರ ಇಟಗಿ ಇವುಗಳ ಆಶ್ರಯದಲ್ಲಿ ವೀರಮಣಿ  ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

    300x250 AD

    ಎಂ.ಪಿ.ಹೆಗಡೆ ಉಳ್ಳಾಲಗದ್ದೆ, ಶ್ರೀಪಾದ ಹೆಗಡೆ ಮೂಡಗಾರು, ಉಮೇಶ ಹೆಗಡೆ ಉಮ್ಮಚಗಿ ಹಿಮ್ಮೇಳದಲ್ಲಿ ಹಾಗೂ ಮಹಾಬಲೇಶ್ವರ ಹೆಗಡೆ ಬಿಳೆಕಲ್ಲು, ಮಹಾಬಲೇಶ್ವರ ಭಟ್ಟ ಇಟಗಿ, ಪುರುಷೋತ್ತಮ ಹೆಗಡೆ ಮುಗದೂರು,ಪ್ರಶಾಂತ ಹೆಗಡೆ ಗೋಡೆ,ಈಶ್ವರ ಭಟ್ಟ ಹಸರಗೋಡು,ವೆಂಕಟ್ರಮಣ ಹೆಗಡೆ ಸಾಲ್ಕಣಿ , ಕು.ಅಭಯ ಹೆಗಡೆ, ಭೂಮಿಕಾ ಹೆಗಡೆ, ಪ್ರಥ್ವಿ ಹೊಸಗದ್ದೆ ಮುಮ್ಮೇಳದಲ್ಲಿ ವಿವಿಧ ಪಾತ್ರನಿರ್ವಹಿಸಲಿದ್ದಾರೆ. 

    Share This
    300x250 AD
    300x250 AD
    300x250 AD
    Leaderboard Ad
    Back to top