
ಕಾರವಾರ: ತಾನು ಸಚಿವರೊಬ್ಬರ ಪಿಎ ಎಂದು ಹೇಳಿ ಶಾಸಕಿ ರೂಪಾಲಿ ನಾಯ್ಕ್ ಬಳಿ 50ಸಾವಿರ ರೂ. ಪಡೆದು ವಂಚಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕಗೆ ಆರೋಪಿಯು ದೂರವಾಣಿ ಕರೆ ಮೂಲಕ ಸಂಪರ್ಕಿಸಿ ತಾನು ಶಾಸಕ ಎನ್.ಮಹೇಶ್ ಅವರ ಪಿಎ ಎಂದು ಹೇಳಿಕೊಂಡು ತುರ್ತಾಗಿ ಹಣದ ಅವಶ್ಯಕತೆ ಇದ್ದು 50ಸಾವಿರ ರೂ ಕೊಡುವಂತೆ ಕೇಳಿ ತನ್ನ ಸ್ನೇಹಿತನ ಬ್ಯಾಂಕ್ ಖಾತೆ ನಂಬರ್ ಕೊಟ್ಟು ಹಣ ಪಡೆದು ವಂಚನೆ ನಡೆಸಿದ್ದಾನೆ.
ಇದಾದ ಬಳಿಕ ಶಾಸಕಿ ರೂಪಾಲಿ ನಾಯ್ಕ್ ಮತ್ತು ಶಾಸಕ ಎನ್.ಮಹೇಶ್ ಬೆಂಗಳೂರಿನಲ್ಲಿ ಮುಖಾಮುಖಿ ಭೇಟಿಯಾದಾಗ ಹಣಪಡೆದ ವಿಚಾರ ಪ್ರಸ್ತಾಪಿಸಿದಾಗ ಶಾಸಕಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಶಾಸಕರ ಪಿಎ ಮಹಾದೇವ ಸ್ವಾಮಿದೂರು ದಾಖಲಿಸಿ ಪೋಲೀಸರು ತನಿಖೆ ಕೈಗೊಂಡು ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.