ಮುಂಡಗೋಡ: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಹಾಗೂ ಬದಲಾದ ಹವಾಮಾನದಿಂದ ಅಧಿಕ ಮಾವಿನ ಬೆಳೆಯ ನಿರೀಕ್ಷೆಯಲ್ಲಿದ್ದ ತಾಲೂಕಿನ ಮಾವಿನ ಬೆಳೆಗಾರ ರೈತರು ಹಾಗೂ ಮಾವಿನ ತೋಟಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಅಕಾಲಿಕ ಮಳೆ ಹಾಗೂ ಇಬ್ಬನಿಯ ಕಾಟದಿಂದ ಮಾವಿನಬೆಳೆ ಕುಂಠಿತಗೊoಡಿದೆ. ಬೆಳೆಯ ಸಲುವಾಗಿ ಮಾಡಿದ ಸಾಲಸೋಲ ತುಂಬುವುದು ಹೇಗೆ ಚಿಂತೆಯಲ್ಲಿ ಕುಳಿತುಕೊಳ್ಳವಂತಾಗಿದೆ.
ನವೆಂಬರ-ಡಿಸೆoಬರ್‌ನಲ್ಲಿ ಮಾವಿನ ಗಿಡಗಳು ಹೂ ತುಂಬಿಕೊoಡು ಕಂಗೊಳಿಸುತ್ತಿತ್ತು. ಈ ಬಾರಿ ಭಾರಿ ಮಾವಿನ ಇಳುವರಿ ಪಡೆಯಬಹುದು ಎಂದು ರೈತರು ಸಂತಸ ಪಟ್ಟಿದ್ದರು.ಮಾವಿನ ಗಿಡಗಳು ಮೈದುಂಬಿಕೊoಡಿರುವ ಹೂಗಳನ್ನು ನೋಡಿದ ಮಾವಿನ ತೋಟಗಳನ್ನು ಗುತ್ತಿಗೆ ಪಡೆಯುವ ಗುತ್ತಿಗೆದಾರರು ಒಳ್ಳೆಯ ಬೆಲೆ ನೀಡಿ ತೋಟಗಳನ್ನು ಗುತ್ತಿಗೆ ಪಡೆದಿದ್ದರು.
ಫೆಬ್ರವರಿ ಹಾಗೂ ಮಾರ್ಚ ತಿಂಗಳಲ್ಲಿ ಆದ ಹವಾಮಾನ ಬದಲಾವಣೆ ಹಾಗೂ ದಟ್ಟವಾದ ಇಬ್ಬನಿ ಬಿದ್ದ ಪರಿಣಾಮ ಹೂಗಳು ಉದುರಿ ಮುದರಿಕೊಳ್ಳುವಂತಾಯಿತು. ಗಿಡಗಳ ತುಂಬ ಕಾಯಿ ಬೀಡುವ ಸಮಯದಲ್ಲಿ ಬದಲಾದ ಹವಾಮಾನದಿಂದ ಗಿಡಗಳಲ್ಲಿ ಅಲ್ಲಲ್ಲಿ ಅಲ್ಪಪ್ರಮಾಣದಲ್ಲಿ ಮಾವಿನ ಸಣ್ಣಸಣ್ಣ ಕಾಯಿಗಳು ಕಾಣಿಸ ತೋಡಗಿದವು.ಇದರಿಂದ ರೈತ ಹಾಗೂ ಗುತ್ತಿಗೆದಾರರು ಗಿಡಗಳಲ್ಲಿ ಕಾಣಿಸಿದ ಮಾವಿನ ಕಾಯಿಗಳನ್ನು ನೋಡಿ ಕಣ್ಣಿರು ಸುರಿಸಿದ್ದಾರೆ. ಅಷ್ಟು ಇಷ್ಟು ಇದ್ದ ಕಾಯಿಗಳನ್ನು ನೋಡಿ ಸಮಾಧಾನದಲ್ಲಿದ್ದ ರೈತರು ಅಲ್ಪ ಪ್ರಮಾಣದಲ್ಲಿ ಕಾಯಿಗಳು ದೊಡ್ಡದಾಗಿದ್ದ ವೇಳೆ ಅಕಾಲಿಕ ಮಳೆಯಿಂದ ಗಿಡಗಳು ಹೊಸ ಚಿಗುರು ಪಡೆದುಕೊಂಡು ಮಾವಿನ ಬೆಳೆಗೆ ಸುನಾಮಿ ಹೊಡೆದಂತಾಗಿ ಬೆಳೆ ಉದುರಿ ಹೋಗಿದೆ.
ಇದರಿಂದ ರೈತ ತುಂಬಾ ನಷ್ಟ ಪಡುವಂತಾಗಿದೆ ಸರಕಾರ ನಷ್ಟದಲ್ಲಿರುವ ಮಾವಿನ ಬೆಳೆಗಾರರ ನೆರೆವಿಗೆ ಬರಬೇಕು. ಅಕ್ಕಪಕ್ಕದ ಜಿಲ್ಲೆಗಳಾದ ಧಾರವಾಡ ಹಾವೇರಿ ಜಿಲ್ಲೆಯ ಮಾವಿನ ಬೆಳೆಗಾರರಿಗೆ ಇನ್ಸೂರೆನ್ಸ ಸೌಲಭ್ಯವನ್ನು ನಮ್ಮ ಜಿಲ್ಲೆಯ ಮಾವಿನ ಬೆಳೆಗಾರರ ರೈತರಿಗೆ ಸೀಗುವಂತಾಗಬೇಕು ಎಂಬುದು ಮುಂಡಗೋಡ ಮಾವಿನ ಬೆಳೆಗಾರರ ಆಗ್ರಹವಾಗಿದೆ.
ಜಿಲ್ಲೆಯ ಮಾವಿನ ಬೆಳೆಗಾರರಿಗೆ ಇನ್ಸುರೆನ್ಸ್ ನೀಡುವಂತೆ ಬೆಳೆಗಾರರ ಆಗ್ರಹ
