Slide
Slide
Slide
previous arrow
next arrow

ಭಾರತದಲ್ಲಿ ಹೆಚ್ಚಿದ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ

300x250 AD

ಜಾಗತಿಕವಾಗಿ ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಮುಂದಿನ ಕೆಲವು ದಶಕಗಳಲ್ಲಿ ಕಚ್ಚಾತೈಲ ನಿಕ್ಷೇಪಗಳು ಬರಿದಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ  ಇತ್ತೀಚಿಗೆ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದ್ದು ಭಾರತ ದೇಶದಾದ್ಯಂತ ಈಗಾಗಲೇ ಹತ್ತುಲಕ್ಷ ಎಲೆಕ್ಟ್ರಿಕ್‌ ವಾಹನಗಳು ಸಂಚರಿಸುತ್ತಿವೆ ಎಂದು ದತ್ತಾಂಶ ವರದಿ ತಿಳಿಸಿದೆ.

ವಾಹನ್‌ ೪.೦ ನೀಡಿರುವ ಮಾಹಿತಿಯ ಪ್ರಕಾರ ಭಾರತದ ರಸ್ತೆಗಳಲ್ಲಿ ಸುಮಾರು ೧೦.೭೬ ಲಕ್ಷ ಎಲೆಕ್ಟ್ರಿಕ್‌ ವಾಹನಗಳು ಸಂಚರಿಸುತ್ತಿವೆ. ಹಾಗೂ ದೇಶದಾದ್ಯಂತ ೧,೭೦೦ ಚಾರ್ಜಿಂಗ್‌ ಸ್ಟೇಷನ್‌ ಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರದ ವತಿಯಿಂದ ಇವಿ ಚಾರ್ಜಿಂಗ್‌ ಮೂಲ ಸೌಕರ್ಯವನ್ನು ಹೆಚ್ಚಿಸಲು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.

300x250 AD

ಈಗಾಗಲೇ ಪ಼ೇಮ್‌ ಇಂಡಿಯಾ ಫೇಸ್-‌೨ ಯೋಜನೆಯಡಿಯಲ್ಲಿ ೨,೮೭೭ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಮಂಜೂರು ಮಾಡಲಾಗಿದೆ. ಹಾಗೂ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮುಂಬೈ, ದೆಹಲಿ, ಬೆಂಗಳೂರು, ಅಹಮದಾಬಾದ್‌, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಎಂಟುನಗರಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

Share This
300x250 AD
300x250 AD
300x250 AD
Back to top