ಹಳಿಯಾಳ: ದಿ. ರಾಜು ಬಾಬು ಧೂಳಿ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ಮರಾಠಾ ಭವನದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಇಂದಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯ ಹೆಚ್ಚಳ ವಾಗಿರುವುದರಿಂದ ಅವಶ್ಯವಾಗಿರುವ ರಕ್ತದಾನಕ್ಕೆ ಯುವಕರು-ಯುವತಿಯರು ಮುಂದೆ ಬರಬೇಕು. ರಕ್ತದಾನ ಮಹಾದಾನ. ಎಂದು ಸಾಮಾಜಿಕ ಕಾರ್ಯಕರ್ತೆ ಪೂಜಾ ಧೂಳಿ ಹೇಳಿದರು.
ಈ ಶಿಬಿರದಲ್ಲಿ 46 ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಶಾಂತಾ ಹಿರೇಕರ, ಡಾ. ಉಮೇಶ ಹಳ್ಳಿಕೇರಿ, ಡಾ ದಯಾನಂದ ಸಾಧಣಿ, ಚೈತ್ರ ರಾಠೋಡ, ವಿಶಾಲ ಕರಣಿ ರಾಘವೇಂದ್ರ ಆನೆಗುಂದಿ, ರಾಘು ನಾಯ್ಕ್, ಅಶೋಕ ಬೆಳಗಾಂವಕರ, ಪ್ರಕಾಶ ಗಿರಿ, ರಿತು ಧೂಳಿ, ಪ್ರಕಾಶ ಕಮ್ಮಾರ, ಯಲ್ಲಪ್ಪಾ ಮಾಲವನಕರ, ರಾಕೇಶ ವಾಣಿ, ಮಂಜುನಾಥ ಬಂಡಿವಾಡ, ನಾಗರಾಜ ಗೌಡಾ, ನಾರಾಯಣ ಕೆಸರೆಕರ ಇದ್ದರು.