Slide
Slide
Slide
previous arrow
next arrow

ಯುವಕರಿಗಾಗಿ 1ಲಕ್ಷಕ್ಕೂ ಅಧಿಕ ಇಂಟರ್ನ್‌ಶಿಪ್ ಅವಕಾಶಗಳು ಆರಂಭ; AICTE ಪೋರ್ಟಲ್‌ನಲ್ಲಿ ಮಾಹಿತಿ

300x250 AD

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಯುವಕರಿಗೆ ಒಂದು ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ ಅವಕಾಶಗಳನ್ನು ಪ್ರಾರಂಭಿಸಿದ್ದಾರೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಈ ಅವಕಾಶಗಳ ಮಾಹಿತಿ ಪಡೆಯಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ್, ನಿರ್ದಿಷ್ಟ ಉದ್ಯಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಅವಕಾಶಗಳು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ 100 ಮಿಲಿಯನ್ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಬೇಕು ಎಂದು ಅವರು ಹೇಳಿದರು.

300x250 AD

ಈ ಹೆಜ್ಜೆ ಸ್ವಾಗತಾರ್ಹ ಆರಂಭ ಎಂದು ಕರೆದ ಶಿಕ್ಷಣ ಸಚಿವರು, ಉದ್ಯಮವು ಎಲ್ಲರಿಗೂ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿದರು. ಇಂಟರ್ನ್‌ಶಿಪ್ ಅವಕಾಶಗಳನ್ನು ವೈವಿಧ್ಯಗೊಳಿಸಬೇಕು ಎಂದು ಉದ್ಯಮ ವಲಯವನ್ನು ಅವರು ಕೇಳಿಕೊಂಡಿದ್ದಾರೆ.

ಹೊಸ ಶಿಕ್ಷಣ ನೀತಿಯು ಯುವಕರ ಭವಿಷ್ಯವನ್ನು ಸಿದ್ಧಗೊಳಿಸಲು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಉದ್ಯಮವನ್ನು ಜೋಡಿಸಲು ಒತ್ತು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Share This
300x250 AD
300x250 AD
300x250 AD
Back to top