• first
    second
    third
    previous arrow
    next arrow
  • ಹಾಲು ಉತ್ಪಾದಕ ರೈತರ ಖಾತೆಗೆ ಡಿ.2021ರ ಹಾಲಿನ ಪ್ರೋತ್ಸಾಹಧನ ಜಮಾ

    300x250 AD

    ಶಿರಸಿ: ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ 5 ರೂ. ಪ್ರೋತ್ಸಾಹಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್‌ ಖಾತೆಗೆ ಮಾ.30 ರ ಬುಧವಾರ ದಂದು ಡಿ. 2021 ನೇ ಮಾಹೆಯ ಹಣ ಜಮಾ ಆಗಿರುತ್ತದೆ ಎಂದು ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಫೆ-2022‌ ನೇ ಮಾಹೆಯ ವರೆಗಿನ ಪ್ರೋತ್ಸಾಹಧನದ ಮಾಹಿತಿಯನ್ನು ನಮ್ಮಿಂದ ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು,‌ ಮಾರ್ಚ-2022 ನೇ ಮಾಹೆಯ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಂದ ಪಡೆಯಲಾಗುತ್ತಿದ್ದು, ಕ್ಷೀರ ಸಿರಿ ತಂತ್ರಾಂಶದಲ್ಲಿ ಮಾಹಿತಿಯನ್ನು ಏಪ್ರೀಲ್‌ 1 ನೇ ತಾರೀಖಿನಿಂದ ಅಳವಡಿಸಲು ಪ್ರಾರಂಭಿಸಲಾಗುವುದು ಎಂದರು.

    300x250 AD

    ಡಿಸೆಂಬರ್-2021 ರ ವರೆಗೆ ಸರ್ಕಾರದಿಂದ ಅತ್ಯಂತ ತ್ವರಿತವಾಗಿ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಜನವರಿ-2022 ನೇ ಮಾಹೆಯ ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ರೈತರ ಬ್ಯಾಂಕ್‌ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಹಾಗೂ ಪ್ರೋತ್ಸಾಹಧನ ಜಮಾ ಆಗದ ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.

    Share This
    300x250 AD
    300x250 AD
    300x250 AD
    Back to top