ಯಲ್ಲಾಪುರ: ಇಡಗುಂದಿಯ ಜೋಗದಮನೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಶಿಕ್ಷಕ ಬಿ. ಎನ್ ಗೌಡ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶಿಕ್ಷಕ ಬಿ ಎನ್ ಗೌಡ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಗ್ರಾಮಸ್ಥರು ಅನೇಕರು ಮಾತನಾಡಿ ಅವರ ಅನುಭವಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಶಿಕ್ಷಕ ಬಿ ಎನ್ ಗೌಡ , ಶಿವರಾಮ ಭಟ್ಟ ಗಣಪತಿ ಭಟ್ಟ, ಆರ್. ಎನ್. ಗೌಡ ಮುಂತಾದವರು ಉಪಸ್ಥಿತರಿದ್ದರು.