
ಕದ್ರಾ: ಕಾಳಿ ಹಿನ್ನೀರಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ.
ಆದ್ದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಕದ್ರಾ ಅಣೆಕಟ್ಟಿನಿಂದ ಮಂಗಳವಾರ ಎರಡು ಗೇಟ್ ಗಳನ್ನು ತೆರೆದು ಸತತವಾಗಿ ನೀರು ಬಿಡಲಾಗಿದೆ. ಜಲಾಶಯದ ಅಧಿಕಾರಿಗಳು ನೀರಿನ ಸ್ಥಿರತೆ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.