ಹೊನ್ನಾವರ: ತಾಲೂಕಿನ ಸಂಶಿಯಲ್ಲಿ ಬಡ ಮಹಿಳೆಯೋರ್ವಳ ಮನೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಜಮೀನಿನ ಕುರುಹುಗಳನ್ನು ನಾಪತ್ತೆ ಮಾಡುವ ಕಾರಣಕ್ಕಾಗಿ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ದೂರಿನಿಂದ ತಿಳಿದು ಬಂದಿದೆ.
ನಾರಾಯಣ ನಾಗಪ್ಪ ಗೌಡರ ಕಿರಿಯ ಸಹೋದರಿಯ ಮದುವೆಯನ್ನು ಮತ್ತೊಂದು ಸಹೋದರಿಯ ಮನೆಯಲ್ಲಿ ಮಾಡುವುದಾಗಿ ನಿರ್ಧರಿಸಿದ್ದರಿಂದ ಅಲ್ಲಿಯೇ ನಡೆಸಲಾಯಿತು ಹಾಗಾಗಿ ಅಲ್ಲಿ ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರೆ ಇಲ್ಲಿ ಅದೇ ಸಮಯ ನೋಡಿ ಶನಿವಾರ ರಾತ್ರಿ ಮನೆಯಲ್ಲಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾರೆ.
ಮನೆಗೆ ಬೆಂಕಿ ತಗುಲಿದ್ದರಿಂದ ಮನೆಯಲ್ಲಿದ್ದಂತಹ ಬಟ್ಟೆಗಳು, ಮನೆ ಬಳಕೆಯ ಸಾಮಗ್ರಿಗಳು ಸೇರಿದಂತೆ ಎಲ್ಲವೂ ಸುಟ್ಟು ಕರಕಲಾಗಿದ್ದು,ಇದರಿಂದ ಸುಮಾರು ಹದಿನೈದು ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಮದುವೆಗೆ ಸಂಗ್ರಹಿಸಿಟ್ಟ 45,000 ರೂ. ಹಣ ಸುಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.