• first
  second
  third
  previous arrow
  next arrow
 • ಮಿಂಚಿದ‌ ಈಶ್ವರ; ಭಾಗವತಿಕೆಯಲ್ಲಿ ಗೆದ್ದ ಆಖ್ಯಾನ

  300x250 AD

  ಶಿರಸಿ:ಪ್ರಬುದ್ಧ‌ ಕಲಾವಿದರ ನರ್ತನ, ಸಂಭಾಷಣೆ, ಭಾಗವತಿಕೆಯಲ್ಲಿ ಎದ್ದು‌ ಬಂದ ಆಖ್ಯಾನದ ಮೂಲಕ ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ‌ ನಿರೀಶ್ವರ ಯಾಗದ ಕುರಿತು ಕಥಾನಕ ಬಿಚ್ಚಿಕೊಂಡಿತು.

  ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಸಂಸ್ಕ್ರತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ದಕ್ಷಯಕ್ಷ ಆಖ್ಯಾನ ಕಲಾಸಕ್ತರ ಮೆಚ್ಚುಗೆ ಪಡೆಯಿತು.

  ಭಾಗವತರಾಗಿ ಕೇಶವ ಹೆಗಡೆ‌ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ಗಣೇಶ ಗಾಂವಕರ್ ಸಹಕಾರ ನೀಡಿದರು.

  300x250 AD

  ಈಶ್ವರನಾಗಿ ವಿನಾಯಕ ಹೆಗಡೆ‌ ಕಲಗದ್ದೆ, ದಕ್ಷನಾಗಿ ಅಶೋಕ ಭಟ್ಟ, ದಾಕ್ಷಾಯಿಣಿಯಾಗಿ ಸುಬ್ರಹ್ಮಣ್ಯ ಮೂರೂರು, ಬ್ರಾಹ್ಮಣನಾಗಿ ಮೂರೂರು ನಾಗೇಂದ್ರ, ವೀರಭದ್ರನಾಗಿ ವೆಂಕಟೇಶ ಬೊಗ್ರಿಮಕ್ಕಿ, ದೇವೇಂದ್ರ ನಾಗಿ ‌ಸಂತೋಷ ಹುಣಸೆಮಕ್ಕಿ, ಬ್ರಾಹ್ಮಣತಿಯಾಗಿ ಅವಿನಾಶ ಕೊಪ್ಪ ಪಾತ್ರ ಕಟ್ಟಿದರು. ಕಲಾವಿದರನ್ನು ಪ್ರಸಿದ್ದ ಜೋತಿಷಿ ಡಾ. ಗೋಪಾಲಕೃಷ್ಣ ಶರ್ಮಾ ಗೌರವಿಸಿದರು.

  Share This
  300x250 AD
  300x250 AD
  300x250 AD
  Back to top