ಶಿರಸಿ:ತಾಲೂಕಿನ ಸಾಹಿತ್ಯ ಚಿಂತನ ಚಾವಡಿಯ ಆಶ್ರಯದಲ್ಲಿ ಎ.3 ರಂದು ಮದ್ಯಾಹ್ನ 3.30 ಕ್ಕೆ ನೆಮ್ಮದಿ ಕುಟೀರದಲ್ಲಿ ‘ಯುಗಾದಿ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ವಹಿಸುವರು. ಹಿರಿಯ ಸಾಹಿತಿ ಡಿ.ಎಸ್.ಭಟ್ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಕೆ.ಎನ್.ಹೊಸ್ಮನಿಯವರು ಮತ್ತು ಕ.ಸಾ.ಪ ಅಧ್ಯಕ್ಷ ಸುಬ್ರಾಯ ಬಕ್ಕಳರವರು ಉಪಸ್ಥಿತರಿರುವರು.
ಜೊತೆಗೆ ಬಳಗದ ಹಿರಿ ಕಿರಿಯ ಕವಿ/ಕವಯತ್ರಿಗಳಿಂದ ‘ಯುಗಾದಿ ಕವಿಗೋಷ್ಠಿ’ ಆಯೋಜಿಸಲಾಗಿದೆ. ಗೋಷ್ಟಿಯಲ್ಲಿ ಹನಿಗವನ ವಾಚಿಸಬಹುದಾಗಿದ್ದು ಆಸಕ್ತ ಕವಿಗಳು ಕಾರ್ಯಕ್ರಮ ಸಂಘಟಕ ದತ್ತಗುರು ಕಂಠಿಯವರಲ್ಲಿ (9483648230) ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.