ಯಲ್ಲಾಪುರ: ಜನರ ಆಶೋತ್ತರಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಿ, ಅಭಿವೃದ್ಧಿ ಕೆಲಸದಲ್ಲಿ ಇಲಾಖೆಗಳು ನೆರವಾಗಬೇಕು. ಮಾನವ ಸಂಪನ್ಮೂಲದ ಸದ್ಬಳಕೆಯೂ ಆಗುವ ಕುರಿತು ಕಾಳಜಿವಹಿಸಬೇಕಿದೆ ಎಂದು ವಜ್ರಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ಪ್ರಸಕ್ತ ಸಾಲಿನ ಮೊದಲ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದಸ್ಯ ಗಜಾನನ ಭಟ್ಟ ಮಾತನಾಡಿ, ಎಲ್ಲಾ ಇಲಾಖೆಯ ಮಾಹಿತಿಯನ್ನು ಸಮಗ್ರವಾಗಿ, ಮುಂಚಿತವಾಗಿ ಮುಕ್ತವಾಗಿ ಸ್ಥಳೀಯ ಪಂಚಾಯತಗಳಿಗೆ ತಿಳಿಸಬೇಕು, ಇಲ್ಲದಿದ್ದರೆ ಸ್ಥಳೀಯ ಸಮಸ್ಯೆಗಳು ದೊಡ್ಡದಾಗಿ ಪರಿಹಾರ ಕಾಣಲು ವಿಳಂಬವಾಗುತ್ತದೆ. ಮಕ್ಕಳ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾಳಜಿ ಮೂಡಿಸಬೇಕು. ಮಕ್ಕಳ ಪೌಷ್ಟಿಕತೆಯ ಬಗೆಗೆ ವಿಶೇಷವಾಗಿ ಮುತುವರ್ಜಿವಹಿಸಬೇಕಿದೆ. ಶಿಥಿಲಾವಸ್ಥೆಯಲ್ಲಿರುವ ಹೊನ್ನಗದ್ದೆ ಅಂಗನವಾಡಿ ಕೇಂದ್ರವನ್ನು ಸಮೀಪದ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಶೀಘ್ರವಾಗಿ ಸ್ಥಳಂತರಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾಥಿಮಾ ಛುಳಕಿ, ಪಶು ಸಂಗೋಪನಾ ಇಲಾಖೆಯಿಂದ ಕೆ.ಜಿ.ಹೆಗಡೆ, ಆರೋಗ್ಯಇಲಾಖೆಯಿಂದ ಶಂಕರ ಜತ್ತಿ, ಸುಭಾಷ ಮ್ಯಾಗೇರಿ, ಉಪವಲಯ ಅರಣ್ಯಾಧಿಕಾರಿ ಎಚ್ ಸಿ ಪ್ರಶಾಂತ,ಜಿ ಆರ್ ಸುಳ್ಯದ್, ಕೆಂಚಪ್ಪ ಹಂಚಿನಾಳ, ಕೃಷಿ ಇಲಾಖೆಯಿಂದ ಪ್ರಮಿಳಾ ಘೋಡಸೆ, ತೋಟಗಾರಿಕೆಯಿಂದ ವೇದಾವತಿ ನಾಯ್ಕ, ಸ್ತ್ರೀ ಶಕ್ತಿ ಒಕ್ಕೂಟದ ಶರೀಫಾ ಮುಲ್ಲಾ, ಗ್ರಾಮ ಪಂಚಾಯತದ ಉಪಾಧ್ಯಕ್ಷೆ ರತ್ನಾ ಬಾಂದೇಕರ್, ಸದಸ್ಯರಾದ ಗಜಾನನ ಭಟ್ಟ, ತಿಮ್ಮಣ್ಣ ಕೋಮಾರ, ಜಿ ಆರ್ ಭಾಗ್ವತ, ಭಗೀರಥ ನಾಯ್ಕ, ಗಂಗಾ ಕೋಮಾರ, ಮುಪ್ಪಾ ಆಗೇರ್,ಲಲಿತಾ ಸಿದ್ದಿ ಇದ್ದರು. ಪಿಡಿಒ ಸಂತೋಷಿ ಬಂಟ್ ಪ್ರಾಸ್ತಾವಿಕ ಮಾತನಾಡಿದರು. ಕಾವ್ಯದರ್ಶಿ ಜಿ.ಎಸ್.ಪತ್ತೇಕರ್ ನಿರ್ವಹಿಸಿದರು, ದತ್ತಾತ್ರೇಯ ಭಟ್ಟ ಕಣ್ಣಿಪಾಲ ವಂದಿಸಿದರು.