• first
    second
    third
    previous arrow
    next arrow
  • ಚಲಿಸುತ್ತಿದ್ದ ಲಾರಿ ಪಲ್ಟಿ; ಪ್ರಾಣಾಪಾಯದಿಂದ ಚಾಲಕ ಪಾರು

    300x250 AD

    ಹೊನ್ನಾವರ: ಸರಕುಗಳನ್ನು ತುಂಬಿಕೊಂಡು ಕುಮಟಾದಿಂದ ಭಟ್ಕದ ಕಡೆಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಗೇರುಸೊಪ್ಪಾದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ಸಂಭವಿಸಿದೆ.

    ಪಲ್ಟಿಯಾದ ರಭಸಕ್ಕೆ ಬಿದ್ದ ಸ್ಥಳದಿಂದ ಸ್ವಲ್ಪ ದೂರದವರೆಗೆ ರಸ್ತೆಯಲ್ಲಿ ಜಾರಿಕೊಂಡು ಹೋಗಿರುವುದರಿಂದ ಲಾರಿ ಜಖಂಗೊoಡಿದೆ.

    ವಾಹನದಲ್ಲಿ ಪಾತ್ರೆಗೆ ಬಳಸುವ ಕಚ್ಚಾ ವಸ್ತುಗಳಿದ್ದವು. ಲಾರಿ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    300x250 AD

    ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ, ಲಾರಿ ಬಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಇದರಿಂದ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ.

    Share This
    300x250 AD
    300x250 AD
    300x250 AD
    Back to top