• first
  second
  third
  previous arrow
  next arrow
 • ವೈಭವಯುತವಾಗಿ ಹೊಸವರ್ಷ ಆಚರಿಸಲು ನಿರ್ಧಾರ; ಗೋಪಾಲಕೃಷ್ಣ ಗಾಂವ್ಕಾರ್

  300x250 AD

  ಯಲ್ಲಾಪುರ: ಯುಗಾದಿ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ನೂತನ ಶುಭಕೃತ್ ಸಂವತ್ಸರವನ್ನು ಸ್ವಾಗತಿಸಲು ನಿರ್ಧರಿಸಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ ಹೇಳಿದರು.

  ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 24 ನೇ ವರ್ಷದ ಯುಗಾದಿ ಉತ್ಸವ ಇದಾಗಿದ್ದು,ಕಳೆದ ಎರಡು ವರ್ಷ ಕೋವಿಡ್ ಕಾರಣ ಬಹಿರಂಗ ಆಚರಣೆ ಸಾಧ್ಯವಾಗಿರಲಿಲ್ಲ. ಈ ಬಾರಿ ವೈಭವಯುತವಾಗಿ ಹೊಸವರ್ಷ ಆಚರಣೆಗೆ ನಿರ್ಧರಿಸಲಾಗಿದೆ ಎಂದರು.

  ಉತ್ಸವದ ಜಾಗೃತಿಗೆ ಮಾ.30 ರಂದು ಸಂಜೆ 4.15 ಕ್ಕೆ ಕಾಳಮ್ಮಾದೇವಸ್ಥಾನದಿಂದ ಬ್ರಹತ್ ಬೈಕ್ ರ್ಯಾಲಿ ನಡೆಯಲಿದೆ. ಏ.2 ರಂದು ಮಧ್ಯಾಹ್ನ 3.15 ಕ್ಕೆ ಕೋಟೆಕರಿಯವ್ವ ದೇವಸ್ಥಾನ ದಿಂದ ಹೊರಟ ಭವ್ಯ ಶೋಭಾಯಾತ್ರೆ ಗ್ರಾಮದೇವಿ ದೇವಸ್ಥಾನದಲ್ಲಿ ಸಂಪನ್ನ ಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ಝಾಂಜ್ ಪತಾಕ್, ಚಂಡೆವಾದ್ಯ ಹಾಗೂ ಸಮಾರು 25 ಕ್ಕೂ ಹೆಚ್ಚು ವಿಭಿನ್ನ ಟ್ಯಾಬ್ಲೋಗಳು ಭಾಗವಹಿಸಲಿವೆ.ಶೋಭಾಯಾತ್ರೆಯ ನಂತರ ಗೋಪಾಲಕೃಷ್ಣ ಹಂಡ್ರಮನೆ ಅವರಿಂದ ಪಂಚಾಂಗ ಪಠಣ ನಡೆಯಲಿದೆ.

  300x250 AD

  ಏ.3 ರಂದು ಸಂಜೆ 5 ಕ್ಕೆ ದೇವಿ ದೇವಸ್ಥಾನದಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರಿಂದ ಧರ್ಮ ಜಾಗೃತಿ ಉಪನ್ಯಾಸ ನಡೆಯಲಿದೆ. ನಂತರ ಪುತ್ತೂರು ನರಸಿಂಹ ನಾಯಕ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

  ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ಸುಧೀರ ಆಚಾರ್ಯ, ಜಗದೀಶ ಪೂಜಾರಿ, ಶ್ರೀನಿವಾಸ ಗಾಂವ್ಕಾರ, ಆದಿತ್ಯ ಗುಡಿಗಾರ, ನಮಿತಾ ಬೀಡಿಕರ್ ಇದ್ದರು.

  Share This
  300x250 AD
  300x250 AD
  300x250 AD
  Back to top