• first
    second
    third
    previous arrow
    next arrow
  • ಅಂಗನವಾಡಿ ನೌಕರರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ

    300x250 AD

    ಸಿದ್ದಾಪುರ:ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ರಿ)ದ ತಾಲೂಕು ಮತ್ತು ವಲಯ ಸಮಿತಿಗಳ ಪರವಾಗಿ ಸ್ಥಳೀಯ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸೋಮವಾರ ಸಲ್ಲಿಸಲಾಯಿತು.

    ಕಡಿತ ಮಾಡಿರುವ ಅನುದಾನವನ್ನು ಮರಳಿ ಕೊಡಬೇಕು. ಶಾಸನಬದ್ಧ ಸವಲತ್ತುಗಳನ್ನು ನೀಡಬೇಕು. 26 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು. ಮಾಸಿಕ ಪಿಂಚಣಿಯೊಂದಿಗೆ ನಿವೃತ್ತಿ ಸೌಲಭ್ಯ ನೀಡಬೇಕು. ಖಾಸಗೀಕರಣ ಮಾಡಬಾರದು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡಬೇಕು. ಬೆಲೆ ಏರಿಕೆಯನ್ನು ನಿಗ್ರಹಮಾಡಲು ಕ್ರಮ ಕೈಗೊಳ್ಳಬೇಕು. ಗುತ್ತಿಗೆ ಮತ್ತು ಯೋಜನಾ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು ಈ ಮುಂತಾದ ಬೇಡಿಕೆಯನ್ನು ಮನವಿಯಲ್ಲಿ ತಿಳಿಸಲಾಯಿತು.

    300x250 AD

    ತಾಲೂಕು ಮತ್ತು ವಲಯ ಸಮಿತಿಗಳ ಪದಾಧಿಕಾರಿಗಳಾದ ಸುಧಾ ಜಿ., ಶ್ರೀಮತಿ ನಾಯ್ಕ, ಯಮುನಾ ನಾಯ್ಕ, ಗೀತಾ ಕೊಂಡ್ಲಿ, ಮಮತಾ ನಾಯ್ಕ, ಸುಚಿತ್ರಾ ಪ್ರಭು, ಗಂಗಾ ನಾಯ್ಕ, ಅಶ್ವಿನಿ ಭಟ್ಟ, ಮಹಾದೇವಿ ಪೂಜಾರಿ ಇತರರು ಶಿರಸ್ತೇದಾರ ಎನ್. ಆಯ್. ಗೌಡ ಅವರ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಿದರು.

    Share This
    300x250 AD
    300x250 AD
    300x250 AD
    Back to top