• Slide
  Slide
  Slide
  previous arrow
  next arrow
 • ಗ್ರಾಮೀಣ ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿ ರಂಗ ಒಂದು ಪ್ರಬಲ ಮಾಧ್ಯಮ; ಆರ್.ಎಂ. ಹೆಗಡೆ

  300x250 AD

  ದ್ದಾಪುರ:ನಾಟ್ಯ ಶ್ರೀಕಲಾತಂಡ ಶಿವಮೊಗ್ಗ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವೀರಭದ್ರ ಸಹಿತ ಗೌರೀಶಂಕರ ಯುವಕ ಸಂಘ ದಾನಮಾಂವ ತಲೆಕೇರಿ ಇದರ ಆಶ್ರಯದಲ್ಲಿ ದಾನಮಾಂವ ರಂಗಮಂದಿರದ ಎದುರು ಯಕ್ಷಭಾವೈಕ್ಯ ಪ್ರದರ್ಶನ ಯಾತ್ರೆ ಅಂಗವಾಗಿ ಯಕ್ಷಗಾನ ಪ್ರದರ್ಶನ ನಡೆಯಿತು.

  2021 ರ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಆರ್.ಎಂ. ಹೆಗಡೆ ಬಾಳೇಸರ ಅವರಿಗೆ ಸನ್ಮಾನ ಕಾರ್ಯಕ್ರಮ ಯುವಕ ಸಂಘದಿಂದ ನಡೆಯಿತು.

  ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಆರ್.ಎಂ. ಹೆಗಡೆ ಬಾಳೇಸರ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಾನು ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಸರ್ಕಾರ ನೀಡಿದ ಪ್ರಶಸ್ತಿ ಬಗ್ಗೆ ಕೃತಜ್ಞತೆ ಹೇಳಿ ಸನ್ಮಾನಿಸಿದ ಯುವಕ ಸಂಘ ಹಾಗೂ ಊರವರಿಗೆ ಧನ್ಯವಾದ ಸಮರ್ಪಿಸಿದರು.

  ಅಡಿಕೆ ಬೆಳೆಗಾರರಲ್ಲಿ ಕೃಷಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಸಹಕಾರ ಕ್ಷೇತ್ರ ಜನರ ಅಗತ್ಯತೆಗಳನ್ನು ಪೂರೈಸಬಲ್ಲ ಮತ್ತು ಜನಸೇವೆಗೆ ಅವಕಾಶವೀಯಬಲ್ಲ ಮಹತ್ವದ ಕಾರ್ಯವ್ಯಾಪ್ತಿಯಾಗಿದೆ. ಗ್ರಾಮೀಣ ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿ ರಂಗ ಒಂದು ಪ್ರಬಲ ಮಾಧ್ಯಮವಾಗಿದೆ. ಗ್ರಾಮೀಣ ಭಾರತದಲ್ಲಿನ ಕೃಷಿ ಉತ್ಪಾದನೆ ಸಂಸ್ಕರಣೆ ಮತ್ತು ಆರ್ಥಿಕ ಚಟುವಟಿಕೆಗಳು ಸಂಘಟಿತವಾಗಿ ಸಾಗುವಂತಾಗಲು ಸಹಕಾರ ಸಂಸ್ಥೆಗಳನ್ನು ಬಲಗೊಳಿಸಬೇಕು. ಆಸಕ್ತ ಮನೋಭಾವದ ಸಹಕಾರಿ ಕಾರ್ಯಕತರ ಸಂಖ್ಯೆ ಹೆಚ್ಚಾಗಬೇಕು ಎಂದರು.

  ಯಕ್ಷನಟ ದತ್ತಮೂರ್ತಿ ಭಟ್ಟ ಶಿವಮೊಗ್ಗರವರು ಯಕ್ಷಗಾನವನ್ನು ಭಾವೈಕ್ಯತೆಯ ಸಂದೇಶಕ್ಕಾಗಿ ಬಸವೇಶ್ವರ, ಅಕ್ಕಮಹಾದೇವಿ, ಕನಕದಾಸ ಮುಂತಾದವರ ವಿಚಾರಧಾರೆ ಹಾಗೂ ಜೀವನದರ್ಶನದೊಂದಿಗೆ ಸಂಯೋಜಿಸಿ ರಾಜ್ಯದಾದ್ಯಂತ ಹಲವು ಪ್ರಯೋಗಗಳನ್ನು ಕೊಡಲಾಗುತ್ತದೆ ಎಂದು ಹೇಳಿ ಆರ್.ಎಂ. ಹೆಗಡೆ ಬಾಳೇಸರ ಅವರನ್ನು ಅಭಿನಂದಿಸಿದರು.

  ಗೋಪಾಲ ಹೆಗಡೆ ದಾನಮಾಂವ ಸನ್ಮಾನಿತರ ಸಾಧನೆ ಕುರಿತು ಮಾತನಾಡಿದರು.

  ಮುಖ್ಯ ಅತಿಥಿಯಾಗಿ, ಟಿ.ಎಂ.ಎಸ್. ನಿರ್ದೇಶಕ ಜಿ.ಎಂ.ಭಟ್ಟ ಕಾಜಿನಮನೆ ಮಾತನಾಡಿ, ಸಹಕಾರ ಪ್ರಶಸ್ತಿಯು ಆರ್.ಎಂ. ಹೆಗಡೆಯವರಿಗೆ ಬರುವ ಮೂಲಕ ಸಿದ್ದಾಪುರ ತಾಲೂಕನ್ನು ಪ್ರಥಮ ಬಾರಿ ಪ್ರವೇಶಿಸಿದೆ. ಇದು ಸಾಧಕರಿಗೆ ಸಂದ ಯೋಗ್ಯ ಗೌರವ ಎಂದು ಹೇಳಿದರು.

  300x250 AD

  ತೀರ್ಥಹಳ್ಳಿ ತಾಲೂಕು ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಶಿಕ್ಷಕರ ಸಹಕಾರಿ ಸಂಸ್ಥೆಯ ಅಧ್ಯಕ್ಷ ಗೃಹನಿರ್ಮಾಣ ಸಂಘದ ಪ್ರಮುಖ ಎಂ.ಡಿ. ಹೆಗಡೆ ಕುಡೇಗೋಡು ಅವರು ಅತಿಥಿಯಾಗಿ ಮಾತನಾಡಿ, ಕೃಷಿ, ವಸತಿ ನಿರ್ಮಾಣ, ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರಿ ಆಂದೋಲನ ಹೆಚ್ಚು ಪರಿಣಾಮಕಾರಿ ಎಂದು ಹೆಳಿದರು.

  ವಾಜಗೋಡ ಗ್ರಾಮಪಂಚಾಯತ ಉಪಾಧ್ಯಕ್ಷೆ ಮಂಗಲಾ ಎ ಗೌಡ, ಸದಸ್ಯರುಗಳಾದ ಕೃಷ್ಣಮೂರ್ತಿ ನಾಯ್ಕ ಐಸೂರು, ಸರಸ್ವತಿ ಗೌಡ, ಸಾಮಾಜಿಕ ಕಾರ್ಯಕರ್ತ ಶಾಂತಕುಮಾರ ಕೋಣೆಮನೆ ಮಾತನಾಡಿದರು. ಅಧ್ಯಕ್ಷತೆಯನ್ನು ಸಾಮಾಜಿಕ ಕಾರ್ಯಕರ್ತ, ಶ್ರೀರಾಮಚಂದ್ರಾಪುರಮಠದ ಗುರಿಕಾರ ಗಜಾನನ ರಾಮ ಭಟ್ಟ ದಾನಮಾಂವ ವಹಿಸಿದ್ದರು.

  ವೀರಭದ್ರ ಸಹಿತ ಗೌರಿಶಂಕರ ದೇವಸ್ಥಾನ ಐಸೂರು ಇದರ ಮೊಕ್ತೇಸರ ರಾಮನಾಥ ಹೆಗಡೆ ತಲೆಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಜಯಂತಿ ಹೆಗಡೆ ತಲೆಕೇರಿ, ಸತ್ಯಪ್ರಭಾ ಪ್ರಾಥನಾಗೀತೆ ಹಾಡಿದರು. ಟಿ.ಎಂ.ಎಸ್. ನಿರ್ದೇಶಕ, ಯುವಕ ಸಂಘದ ಅಧ್ಯಕ್ಷ ಎಂ.ಎನ್. ಹೆಗಡೆ ತಲೆಕೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು.

  ಶಿಕ್ಷಕಿ ಶ್ರೀಮತಿ ಗೌಡ ಸನ್ಮಾನಪತ್ರ ವಾಚಿಸಿದರು. ಕಲಾವಿದ ಶಂಕರನಾರಾಯಣ ಹೆಗಡೆ ದಾನಮಾಂವ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.

  ಬ್ರಹ್ಮಕಪಾಲ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಖ್ಯಾತ ಭಾಗವತ ಕೊಳಗಿ ಕೇಶವ ಹೆಗಡೆ, ಮಾಧವ ಹೆಗಡೆ, ಗಣಪತಿ ಕಟ್ಟಾಳೆ, ಗುರುಮೂರ್ತಿ ತೆಲುಗಾರ, ಹಿಮ್ಮೇಳದಲ್ಲಿ ವಿದ್ವಾನ್ ದತ್ತಮೂರ್ತಿ ಭಟ್ಟ, ವಿನಾಯಕ ಕಲಗದ್ದೆ ಅಶೋಕ ಭಟ್ಟ, ಮಹಾಬಲೇಶ್ವರ ಭಟ್ಟ ಇಟಗಿ, ಪ್ರಭಾಕರ ಹಣಜಿಬೈಲು ಮುಂತಾದ ನಟರು ಮುಮ್ಮೇಳದಲ್ಲಿ ಅಭಿನಯಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top