ಸಿದ್ದಾಪುರ:ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಮ್ಮ ವ್ಯಾಪ್ತಿಯ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳ ಮೂಲಕ ಜಿಪಂ ಮುಖ್ಯಕಾರ್ಯನಿರ್ವಾಹಕರಿಗೆ ಸೋಮವಾರ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರುಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹ ಧನ ನೀಡಬೇಕು. ಆಶಾಗಳಿಂದ ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವ ಕೆಲಸವನ್ನು ಕೈಬಿಡಬೇಕು. ಇಲಾಖೆಯ ಸುತ್ತೋಲೆಯಂತೆ ಆಶಾ ಕಾರ್ಯಕರ್ತೆಯರಿಗೆ ಕ್ರೈಮ ರಿಪೋರ್ಟ್ ಮತ್ತು ರಿಲೀಸ್ ಕಾಪಿಗಳನ್ನು ಕಡ್ಡಾಯವಾಗಿ ನೀಡಬೇಕು.ಆಶಾಗಳಿಗೆ ಬಿಗದಿಪಡಿಸಲಾದ ಕ್ಷೇತ್ರದಲ್ಲಿ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳ ಮನವಿಯನ್ನು ನೀಡಿದರು.
ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದೆ, ರೇಖಾ ಹೆಗಡೆ,ಗಂಗಾ ನಾಯ್ಕ, ಚಿತ್ರಾವತಿ ಕೆ.ನಾಯ್ಕ, ಮಂಗಲಾ ಆರ್.ನಾಯ್ಕ, ದೇವಕಿ ಜಿ.ಗೌಡ, ತಾರಾ ಡಿ. ನಾಯ್ಕ, ಮಮತಾಜ್ ಬಿ. ಸಾಬ್ ಇದ್ದರು.