• first
    second
    third
    previous arrow
    next arrow
  • ಗೋಕರ್ಣದ ಎಸ್.ವಿ.ಜಠಾರ್ ನಿಧನಕ್ಕೆ ಸಂಸದ ಅನಂತಕುಮಾರ ಹೆಗಡೆ ಸಂತಾಪ

    300x250 AD

    ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಗೋಕರ್ಣದ ಎಸ್.ವಿ.ಜಠಾರ ಇವರ ನಿಧದ ಸುದ್ದಿ ತಿಳಿದು ಸಂಸದ ಅನಂತಕುಮಾರ ಹೆಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಡಾ.ಜಠಾರರವರು ಆಯುರ್ವೇದ ವೈದ್ಯರಾಗಿ ಸೇವೆಯ ಜೊತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಭಾರತ ಮಾತೆಯ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡವರು. ಅನೇಕ ರಾಷ್ಟ್ರ ಭಕ್ತರ ನಿರ್ಮಾಣದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ಹಿರಿಯ ಜೀವವೊಂದು ಇಂದು ನಮ್ಮನ್ನಗಲಿದೆ.

    300x250 AD

    ಸರಳ, ಸಜ್ಜನ ವ್ಯಕ್ತಿತ್ವದ ಇವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತ ಬಂದಿರುತ್ತಾರೆ. ಅವರ ಆತ್ಮಕ್ಕೆ ಸದ್ಗತಿಯನ್ನೂ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಸಂಸದರು ಪ್ರಾರ್ಥಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top