• first
  second
  third
  previous arrow
  next arrow
 • ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ-ಪ್ರತಿಭಟನೆ

  300x250 AD

  ಶಿರಸಿ:2022-23ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನದಲ್ಲಿ ಹೆಚ್ಚಳ ಮಾಡಿರುವುದನ್ನು ಹೊರತುಪಡಿಸಿ, ಉಲ್ಲೇಖಿತ ಮನವಿ ಪತ್ರದಲ್ಲಿನ ಇತರ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಕಡೆಗಣಿಸಿರುವುದಕ್ಕೆ ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ರಾಜ್ಯ ಸಮಿತಿಯು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಇಂದು ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಆಶಾ ಕಾರ್ಯಕರ್ತೆಯರ ಸಂಘದಿಂದ ಮನವಿ ಸಲ್ಲಿಸಲ್ಲಾಯಿತು.

  ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವ ಧನವನ್ನು ಕನಿಷ್ಠ ರೂ. 2000 ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ, ಕಡೆಗೆ ರೂ.1000 ವಾದರೂ ಹೆಚ್ಚಳ ಮಾಡಿರುವುದನ್ನು ನಮ್ಮ ಸಂಘವು ಸ್ವಾಗತಿಸುತ್ತದೆ. ಆದರೆ ಸಂಘದ ರಾಜ್ಯ ಸಮಿತಿಯಿಂದ ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಿರುವ ಉಲ್ಲೇಖಿತ ಮನವಿ ಪತ್ರದಲ್ಲಿರುವ ಇತರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಕ್ರಮಗಳನ್ನು ಘೋಷಣೆ ಮಾಡದೆ ಕಡೆಗಣಿಸಿರುವುದಕ್ಕೆ ಸಂಘದಿಂದ ಆಶಾ ಕಾರ್ಯಕರ್ತೆಯರು ಇಂದು ಪ್ರತಿಭಟಿಸಿದ್ದಾರೆ. ಅಲ್ಲದೆ ಬಜೆಟ್ ಪೂರ್ವದಲ್ಲಿ ಸಲ್ಲಿಸಿರುವ ಬೇಡಿಕೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ಕರೆಯಬೇಕು ಹಾಗೂ ಕೂಡಲೇ ಸೂಕ್ತ ಪರಿಹಾರ ಕ್ರಮಗಳನ್ನು ಪ್ರಕಟಿಸಬೇಕೆಂದು ಒತ್ತಾಯಿಸಿದರು.

  ಬೇಡಿಕೆಗಳು :

  1. ಆಶಾ ನಿಧಿ ಪೋರ್ಟಲ್‍ನ ಬಹು ಬಗೆಯ ಸಮಸ್ಯೆಗಳಿಂದಾಗಿ, ಮಾಡಿದಷ್ಟು ಕೆಸಕ್ಕೆ ಬರಬೇಕಾದಷ್ಟು ಪ್ರೋತ್ಸಾಹಧನ ಬರುತ್ತಿಲ್ಲ. ಚಟುವಟಿಕೆ ಆಧರಿಸಿ ಪ್ರೋತ್ಸಾಹಧನ ಪಡೆಯಲು ಆಶಾ ನಿಧಿ ಪೋರ್ಟಲ್‍ನಲ್ಲಿ ಚಟುವಟಿಕೆಗಳ ಕಡ್ಡಾಯ ನೋಂದಣಿ ತೆಗೆದು ಹಾಕಬೇಕು; ಮಾಡಿದ ಎಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹಧನ ಪಾವತಿ ಮಾಡಬೇಕು.
  2. ಅದಾಗದಿದ್ದರೆ, ಈಗ ಇರುವ ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನ ರೂ.5000, ನಿಗದಿತ ರುಟೀನ್ ಚಟುವಟಿಕೆಗಳಿಗೆ ನೀಡುವ ರೂ.2000 ಮತ್ತು ಈವರೆಗೆ ಆರ್‍ಸಿಎಚ್ ಪೆÇೀರ್ಟಲ್ ನಲ್ಲಿ ಎಂಟ್ರಿ ಮಾಡುತ್ತಿದ್ದ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅಂದಾಜು ಪ್ರೋತ್ಸಾಹಧನ ರೂ.5000 ಗಳನ್ನು ಒಟ್ಟಿಗೆ ಸೇರಿಸಿ, ರೂ.12,000 ಮಾಸಿಕ ನಿಶ್ಚಿತ ಗೌರವಧನ ನಿಗದಿ ಮಾಡಬೇಕು.
  3. ತಮ್ಮ ಕೆಲಸದ ಸ್ಥಳದಿಂದ ಇಲಾಖೆಯ ಕೆಲಸಗಳಿಗಾಗಿ ಬೇರೆ ಸ್ಥಳಗಳಿಗೆ ಹೋಗುವ ಎಲ್ಲಾ ಕಾರ್ಯಕರ್ತೆಯರಿಗೆ ದಿನ ಭತ್ಯೆ ಮತ್ತು ಸಾರಿಗೆ ಭತ್ಯೆ ನಿಗದಿಪಡಿಸಿ.
  4. ತೀವ್ರವಾದ ಅನಾರೋಗ್ಯ ತೊಂದರೆಯಾದರೆ 3 ತಿಂಗಳು / ಹೆರಿಗೆ ಸಮಯದ 6 ತಿಂಗಳುಗಳ ಕಾಲ ನಿಶ್ಚಿತ ಗೌರವಧನ ಮತ್ತು ನಿಗದಿತ ಪ್ರೋತ್ಸಾಹಧನ ನೀಡಲು ಸೂಕ್ತ ಆದೆ ೀಶ ಮಾಡಿ.
  5. ವಿವಿಧ ಗಂಭೀರ ಕಾಯಿಲೆಗಳ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ಇಲಾಖೆಯಿಂದ ಮರುಪಾವತಿ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ, ಆಶಾ ಕಾರ್ಯಕರ್ತೆಯರಿಗೂ ಮರುಪಾವತಿ ಯೋಜನೆ ರೂಪಿಸಿ ಕೂಡಲೇ ಆದೇಶ ಹೊರಡಿಸಿ.
  6. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರದ ಖರ್ಚು ವೆಚ್ಚಗಳನ್ನು ಪರಿಗಣಿಸಿ ಅವರಿಗೆ ಮಾಸಿಕ ಕನಿಷ್ಠ ರೂ.15,000 ನಿಶ್ಚಿತ ಗೌರವಧನ ನಿಗದಿ ಮಾಡಿ.
  7. ಆಶಾ ಫೆಸಿಲಿಟೇಟರ್ ರನ್ನು ಆಶಾಯಿಂದ ಬೇರ್ಪಡಿಸಿ ಅವರಿಗೆ ಮಾಸಿಕ ರೂ. 12,000 ಗೌರವ ಧನ ನಿಗದಿ ಮಾಡಿ. ಸಾರಿಗೆ ಭತ್ಯೆ ಪ್ರತ್ಯೇಕವಾಗಿ ನೀಡಿ. ಮತ್ತು ನಗರ ಪ್ರದೇಶದಲ್ಲೂ ಆಶಾ ಫೆಸಿಲಿಟೇಟರ್ ಗಳನ್ನು ನೇಮಿಸಿ.
  8. ಐಸಿಡಿಎಸ್ ಕೆಲಸಗಳನ್ನು ಹೊರತುಪಡಿಸಿ, ಇತರ ವಿವಿಧ ಇಲಾಖೆಯ ಕೆಲಸಗಳನ್ನು ಅಂಗನವಾಡಿ ನೌಕರರಿಂದ ಮಾಡಿಸಬಾರದು ಎಂದು ಅಂಗನವಾಡಿ ನೌಕರರಿಗೆ ಇರುವ ಆದೇಶದಂತೆ, ಆಶಾ ಯೋಜನೆಯ ಹೊರತಾಗಿ ಇತರ ಕೆಲಸಗಳಿಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಬಾರದು ಎಂದು ಆದೇಶ ಹೊರಡಿಸಿ.
  9. ಕಾರ್ಯಕರ್ತೆ ದಿನನಿತ್ಯ ಮಾಡುವ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಲು ಇರುವ ನಿರ್ದಿಷ್ಟ ನಮೂನೆಯ ಆಶಾ ಡೈರಿಯನ್ನು ಪ್ರತಿ ವರ್ಷವೂ ನೀಡಬೇಕು.
  10. ಪ್ರತಿವರ್ಷವೂ ಸರಿಯಾದ ಸಮಯಕ್ಕೆ ಉತ್ತಮ ಗುಣಮಟ್ಟದ ಸಮವಸ್ತ್ರ ಸರಬರಾಜು ಮಾಡಬೇಕು. ಸಮವಸ್ತ್ರ ವನ್ನು ಸೀರೆ ಅಥವಾ ಚೂಡಿದಾರ್ ರೂಪದಲ್ಲಿ ಧರಿಸಲು ಅವಕಾಶ ನೀಡಬೇಕು.
  11. ಆಶಾ ನಿಧಿ ಪೋರ್ಟಲ್‍ ತೊಂದರೆಯಿಂದ ಆಶಾ ಕಾರ್ಯಕರ್ತೆಯರಿಗೆ ಇಲ್ಲ್ಲಿಯವರೆಗೆ ಆಗಿರುವ ಆರ್ಥಿಕ ನಷ್ಟವನ್ನು ಹಿಂಬಾಕಿ ರೂಪದಲ್ಲಿ ನಷ್ಟ ಪರಿಹಾರ ತುಂಬಿ ಕೊಡಬೇಕು.

  ಆಶಾ ಕಾರ್ಯಕರ್ತೆರ ಈ ಮೇಲಿನ ಪ್ರಮುಖ ಬೇಡಿಕೆಗಳಿಗೆ ಹಲವಾರು ವರ್ಷಗಳಿಂದ ಇಲಾಖೆ ಸಹಮತ ವ್ಯಕ್ತಪಡಿಸಿದ್ದರೂ ಈ ಕುರಿತು ಯಾವುದೇ ಅಧಿಕೃತ ಆದೇಶಗಳು ಇಲ್ಲವಾದ್ದರಿಂದ ಈ ಮೇಲಿನ ಎಲ್ಲಾ ವಿಷಯಗಳಿಗೆ ತುರ್ತಾಗಿ ಸರ್ಕಾರದ ಅಧಿಕೃತ ಆದೇಶಗಳನ್ನು ಮಾಡಬೇಕೆಂದು ಮತ್ತೊಮ್ಮೆ ಈ ಮೂಲಕ ಇಲಾಖೆ ಮತ್ತು ಸರ್ಕಾರವನ್ನು ಒತ್ತಾಯಿಸಿದರು.

  300x250 AD

  ಈ ಕುರಿತು ಸರ್ಕಾರ ಮತ್ತು ಇಲಾಖೆ ನಿರ್ಲಕ್ಷ್ಯವನ್ನು ಪ್ರತಿಭಟಿಸಿ, ನಾಳೆಯೂ ಸಹ ರಾಜ್ಯದಾದ್ಯಂತ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುತ್ತಿದೆ. ಇನ್ನೂ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳುವುದು ಸಂಘಕ್ಕೆ ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

  ಮನವಿ ನೀಡುವ ಸಂದರ್ಭದಲ್ಲಿ ಮಹಂತೇಶ ಬೀಳೂರ, ಮುಖಂಡರು, ಲಕ್ಷ್ಮೀ ನಾಯ್ಕ ತಾಲೂಕ ಅಧ್ಯಕ್ಷರು, ಅರ್ಚನಾ ನಾಯ್ಕ, ತಾಲೂಕ ಕಾರ್ಯದರ್ಶಿ, ಸೀತಾ ನಾಯ್ಕ, ಸವಿತಾ ಹೆಗಡೆ, ನೇತ್ರಾವತಿ ಗೌಡ, ಮಹಾಲಕ್ಷ್ಮೀ, ರೇಣುಕಾ ಪಂಗಡಗರ, ಮುಂತಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top