• first
  second
  third
  previous arrow
  next arrow
 • ಯಲ್ಲಾಪುರದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಬಿಸ್ಕತ್ ವಿತರಣೆ

  300x250 AD

  ಯಲ್ಲಾಪುರ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ವತಿಯಿಂದ ಇಂದು ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆಯುತ್ತಿರುವ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬನವಾಸಿ ಭಾಗದ 10 ಪಂಚಾಯತ್ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಾದ ಬನವಾಸಿಯ ಜಯಂತಿ ಪ್ರೌಢ ಶಾಲೆಯಲ್ಲಿ 297 ವಿದ್ಯಾರ್ಥಿಗಳು, ಹಾಗೂ 25 ಸಿಬಂದಿಗಳಿಗೆ ಹಾಗೂ ಇಸಳೂರು ಪ್ರೌಢ ಶಾಲೆಯಲ್ಲಿ 309 ವಿದ್ಯಾರ್ಥಿಗಳು ಹಾಗೂ 25 ಸಿಬ್ಬಂದಿಗಳಿಗೆ 4000 ಕ್ಕೂ ಹೆಚ್ಚಿನ ಬಿಸ್ಕತ್ತು ಪ್ಯಾಕ್ ನ್ನು ವಿತರಣೆ ಮಾಡಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಅಭಿನಂದನಾ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

  ಈ ಸಂದರ್ಭದಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಫ್.ನಾಯ್ಕ, ಮಾಜಿ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸವರಾಜ ದೊಡ್ಮನಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಲತಾ ಕಾಳೇರಮನಿ, ಬನವಾಸಿ ಘಟಕಾಧ್ಯಕ್ಷರಾದ ದೀಪಕ್ ಬಂಗ್ಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಿರಣ್ ನಾಯ್ಕ, ಶರೀತಾ ಗೌಡ, ಬಿ.ಶಿವಾಜಿ ಬನವಾಸಿ, ಮಾಜಿ ಬಿಸಲಕೊಪ್ಪ ಗ್ರಾಮಪಂಚಾಯತ್ ಸದಸ್ಯರಾದ ಮಲ್ಲೇಶಪ್ಪ ಗೊರವರ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶಿವಣ್ಣ ನಾಯ್ಕ ಹಳ್ಳಿಕೊಪ್ಪ , ತಿಮ್ಮಪ್ಪ ಮಡಿವಾಳ, ಮುದ್ದಪ್ಪ ನಾಯ್ಕ ಪ್ರಮುಖರಾದ ಮಹಾಂತೇಶ ನಾಯ್ಕ ಉಮ್ಮುಡಿ ಹಾಗೂ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನ ಸಂಯೋಜಕರಾದ ಮಹಾಬಲೇಶ್ವರ ನಾಯ್ಕ, ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಂಗಲಾ ಜೋಶಿ ಮುಂತಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top