• Slide
  Slide
  Slide
  previous arrow
  next arrow
 • ಕೇರಮ್ ಸ್ಪರ್ಧೆ: ಒಂದೇ ಹೊಡೆತದಲ್ಲಿ 5 ಕಾಯಿನ್ ಬೀಳಿಸಿದ ಚಂದ್ರು ಭಟ್ಟ

  300x250 AD

  eUK ವಿಶೇಷ: ಕೇರಮ್ ಆಟದ ವಿಶೇಷತೆಯೆ ಇದು. ಆಟಗಾರನ ಜಾಣ್ಮೆ, ತಾಳ್ಮೆ ಮತ್ತು ಸೃಜನಾತ್ಮಕ ಆಟದ ಮೂಲಕ ನೋಡುಗರನ್ನು ಬೆರಗಾಗುವಂತೆ ಮಾಡುವ ಕೇರಮ್ ಆಟ ಹೆಚ್ಚಿನವರಿಗೆ ಅಚ್ಚುಮೆಚ್ಚು.

  ಕೇವಲ ಒಂದೇ ಒಂದು ಶಾಟ್ ಅಲ್ಲಿ 5 ಕಾಯಿನ್ ಗಳನ್ನು ಬೀಳಿಸುವ ಮೂಲಕ ಶಿರಸಿಯ ಸ್ಪೂರ್ತಿ ಕೇರಮ್ ಅಸೋಸಿಯೇಷನ್ ಮಾಲೀಕ ಚಂದ್ರು ಭಟ್ಟ, ಸ್ಪರ್ಧೆಯೊಂದರಲ್ಲಿ ಸಾಧನೆಗೈದಿದ್ದಾರೆ.

  ‘ಕೇರಮ್ ಡಿನ್’ ಎನ್ನುವ ಚ್ಯಾನೆಲ್ ಒಂದು ಹೊಡೆತದಲ್ಲಿ ಐದು ಕಾಯಿನ್’ಗಳನ್ನು ಬೀಳಿಸುವ ಸ್ಪರ್ಧೆಯನ್ನು ಒಡ್ಡಿತ್ತು. ಡಿಸೆಂಬರ್ ಅಂತ್ಯದವರೆಗೆ ಈ ಸ್ಪರ್ಧೆ ನಡೆಯಲಿದ್ದು, ಮೊದಲ ಐದು ಜನರಿಗೆ ಪ್ರಶಸ್ತಿ ಸಿಗಲಿದೆ. ಈ ವರೆಗೆ ಕೇವಲ ಇಬ್ಬರು ಮಾತ್ರ ಈ ಸಾಧನೆಗೈದಿದ್ದು, ಅವರಲ್ಲಿ ಶಿರಸಿಯ ಚಂದ್ರು ಭಟ್ಟ ಮೊದಲಿಗರಾಗಿದ್ದಾರೆ.

  300x250 AD

  ಚಂದ್ರು ಭಟ್ಟ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನೇಕರು ರಾಷ್ಟ್ರಮಟ್ಟದ ಸ್ಫರ್ಧೆಯಲ್ಲಿ ಪ್ರತಿನಿಧಿನಿಸಿದ್ದು ಉಲ್ಲೇಖನೀಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಚಂದ್ರು ಭಟ್ಟ, ಸ್ಪೂರ್ತಿ ಕೇರಮ್ ಅಸೋಸಿಯೇಷನ್, ದೇವಿಕೆರೆ ರಸ್ತೆ, ಶಿರಸಿ ದೂ: 9483777600

  Share This
  300x250 AD
  300x250 AD
  300x250 AD
  Leaderboard Ad
  Back to top