• first
  second
  third
  previous arrow
  next arrow
 • ಎ.9,10ಕ್ಕೆ ಸುಗಮ ಸಂಗೀತ ತರಬೇತಿ ಶಿಬಿರ; ಮೊದಲು ಬಂದವರಿಗೆ ಆದ್ಯತೆ

  300x250 AD

  ಶಿರಸಿ:ಸ್ವರಾಧ್ಯ ಮ್ಯೂಜಿಕ್ ಫೋರಂ ವತಿಯಿಂದ 8 ರಿಂದ 50 ವರ್ಷ ವಯೋಮಾನದವರಿಗೆ “ಸುಗಮ ಸಂಗೀತ ತರಬೇತಿ ಶಿಬಿರ”ವನ್ನು ಎ.9 ರಿಂದ ಎ.10 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 4.30 ರವರೆಗೆ ಸಾಮ್ರಾಟ್ ಹೋಟೆಲ್ ಎದುರಿನ ನೆಮ್ಮದಿ ಕುಟೀರದಲ್ಲಿ ಏರ್ಪಡಿಸಲಾಗಿದೆ.

  ಸಹಸ್ರಕಂಠಗಳ ಸಮೂಹ ಗಾಯನದಲ್ಲಿ 3 ಬಾರಿ ದಾಖಲೆ ಸಾಧಿಸಿದ ಬೆಂಗಳೂರಿನ ಡಾ. ಬಂಡ್ಲಹಳ್ಳಿ ವಿಜಯಕುಮಾರ್ ತರಬೇತಿ ನೀಡಲಿದ್ದಾರೆ.

  ಇಲ್ಲಿ ನಾಡು-ನುಡಿ ಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ದಾಸರ ಪದಗಳ ತರಬೇತಿ ನೀಡಲಿದ್ದು, ಈ ಶಿಬಿರದಲ್ಲಿ ಸೀಮಿತ ಅವಕಾಶಗಳಿರುವುದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.

  300x250 AD

  ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ 7892848936 ಈ ನಂಬರ್ ಗೆ ಸಂಪರ್ಕಿಸಬಹುದಾಗಿದೆ.

  Share This
  300x250 AD
  300x250 AD
  300x250 AD
  Back to top