• first
    second
    third
    previous arrow
    next arrow
  • ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊರ್ವನ ಶವಪತ್ತೆ; ತನಿಖೆ ಆರಂಭ

    300x250 AD

    ಹೊನ್ನಾವರ: ಗೇರುಮರಕ್ಕೆ ನೇಣು ಬಿಗಿದಕೊಂಡು ಕೊಳೆತ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ತಾಲೂಕಿನ ಕವಲಗೇರಿಯ ಗೇರು ತೋಪಿನಲ್ಲಿ ಪತ್ತೆಯಾಗಿದೆ.

    ವ್ಯಕ್ತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿದ್ದು, ಕಳೆದ ಐದಾರು ದಿನಗಳ ಹಿಂದೆಯೆ ವ್ಯಕ್ತಿ ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಶವವು ಕೊಳೆತು ನಾರುತ್ತಿದ್ದು, ವ್ಯಕ್ತಿಯ ಪತ್ತೆಗೆ ತನಿಖೆ ಆರಂಭವಾಗಿದೆ.

    ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ.

    300x250 AD

    ಮೇಲ್ನೋಟಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ ತನಿಖೆಯಿಂದ ನಿಖರ ಮಾಹಿತಿ ದೊರೆಯಲಿದೆ.

    Share This
    300x250 AD
    300x250 AD
    300x250 AD
    Back to top