
ಕಾರವಾರ: ಜಿಲ್ಲೆಯಲ್ಲಿರುವ ವಿವಿಧ ಜಲಾಶಯಗಳಲ್ಲಿನ ನೀರಿನ ಮಟ್ಟದ ಕುರಿತು ಸೋಮವಾರ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಾರವಾರದ ಕದ್ರಾ ಜಲಾಶಯದಲ್ಲಿ 30.20ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ. ಯಲ್ಲಾಪುರದ ಕೊಡಸಳ್ಳಿ ಡ್ಯಾಮ್ ನಲ್ಲಿ 70.1 ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ. ತಟ್ಟೀ ಹಳ್ಳದಲ್ಲಿ 451.81ಮೀ ನೀರಿದ್ದು ಬೊಮ್ನಳ್ಳಿ ಜಲಾಶಯದಲ್ಲಿ 434.36ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ.
ಹಾಗೂ ಗೇರುಸೊಪ್ಪ ಜಲಾಶಯದಲ್ಲಿ 51.44ಮೀ ನೀರನ್ನು ಕಾಯ್ದುಕೊಳ್ಳಲಾಗಿದೆ. ಸೂಪಾ ಜಲಾಶಯದಲ್ಲಿ 571.45 ಮೀ ನೀರನ್ನು ಕಾಪಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.