ಶಿರಸಿ: ಇಲ್ಲಿನ ಶಬರ ಸಂಸ್ಥೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಕಾರದಲ್ಲಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮವನ್ನು ಮಾ.28 ರ ಸಂಜೆ ೫:೪೫ ರಿಂದ ಸೋಂದಾ ಮುತ್ತಿನಕೆರೆ ವೆಂಕಟರಮಣ ದೇವಸ್ಥಾನದ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಶುಭದಾ ಮುಧೋಳ ಗಾಯನಕ್ಕೆ ಕೆ.ಪಿ.ಹೆಗಡೆ ದಾಸನಕೊಪ್ಪ ಹಾರ್ಮೋನಿಯಂ, ಕಿರಣ ಹೆಗಡೆ ಕಾನಗೋಡ ತಬಲಾ ಸಹಕಾರ ನೀಡಲಿದ್ದಾರೆ.
ಮೈಸೂರಿನ ಹರ್ಷಿಣಿ ಪುರುಷೋತ್ತಮ ಅವರಿಂದ ಭರತನಾಟ್ಯ ನಡೆಯಲಿದೆ.
ರಾತ್ರಿ ೮ಕ್ಕೆ ಪ್ರೋ.ಎಂ.ಎ.ಹೆಗಡೆ ದಂಟ್ಕಲ್ ಅವರ ಸಾಹಿತ್ಯ, ನಿರ್ದೇಶನದ ಶ್ರೀಕೃಷ್ಣಂ ವಂದೇ ವಿಶ್ವಶಾಂತಿ ಯಕ್ಷನೃತ್ಯ ರೂಪಕವನ್ನು ತುಳಸಿ ಹೆಗಡೆ ಪ್ರಸ್ತುತಗೊಳಿಸಲಿದ್ದಾರೆ.
ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಬರ ಸಂಸ್ಥೆ ಮುಖ್ಯಸ್ಥ ನಾಗರಾಜ್ ಜೋಶಿ ಸೋಂದಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.