• first
  second
  third
  previous arrow
  next arrow
 • ನಮ್ಮ ಆದಾಯದ ಒಂದು ಭಾಗ ಭಗವಂತನಿಗೆ ಎತ್ತಿಡಬೇಕು; ಕಮಲಾಕರ ಭಟ್ಟ

  300x250 AD

  ಸಿದ್ದಾಪುರ: ದೈವಾನುಷ್ಠಾನ ಕೊರತೆಯೇ ಮಾನಸಿಕ‌ ಅಶಾಂತಿಗೆ ಕಾರಣ. ಇದರ ನಿವಾರಣೆಗೆ ನಮ್ಮ ಆದಾಯದ‌ ಒಂದು ಭಾಗ ದೇವರಿಗೆ ಎತ್ತಿಟ್ಟರೆ ಕೊರತೆ ಆಗದು ಎಂದು ಪ್ರಸಿದ್ಧ ಜೋತಿಷಿ ಡಾ. ಕಮಲಾಕರ ಭಟ್ಟ ಹೇಳಿದರು.

  ಗುರುವಾರ ಅವರು ತಾಲೂಕಿನ ಬೊಗ್ರಿಮಕ್ಕಿ ಶೀರಳ್ಳಿಯ ಗಂಗಾಕಲ್ಲೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪಿತ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು‌ ಮಾತನಾಡಿದರು.

  ಕಾಶಿಯ ಪಕ್ಕದಲ್ಲಿ ಗಂಗೆ ಹರಿಯುತ್ತದೆ. ಆದರೆ ಇಲ್ಲಿ‌ನ ಕಲ್ಲೇಶ್ವರನ ಬಳಿಯೇ ಗಂಗಾಷ್ಟಮಿಯಂದು ಗಂಗೋದ್ಭವ ಆಗುತ್ತದೆ. ನಮಗೆಲ್ಲ ಕಾಶಿಗೆ ಹೋಗಲಾಗುವದಿಲ್ಲ. ಅವರಿಗೆಲ್ಲ ಈ ನೆಲ ಪುಣ್ಯಕ್ಷಣವಾಗಿಸುತ್ತದೆ ಎಂದ ಅವರು, ಅನ್ಯ ಕ್ಷೇತ್ರ ‌ಮಾಡುವ‌ ಪಾಪ‌ ಪುಣ್ಯ ಈ ಕ್ಷೇತ್ರದಲ್ಲಿ‌ ಕಳೆಯುತ್ತದೆ. ಪುಣ್ಯ‌ಕ್ಷೇತ್ರದ ಕಾರ್ಯ ಪರದಲ್ಲಿ ವಜ್ರಲೇಪವಾಗಿ ಕಾಪಾಡುತ್ತದೆ ಎಂದರು.

  ಸಾಮಾಜಿಕ ಪ್ರಮುಖ ಡಾ. ಶಶಿಭೂಷಣ‌ ಹೆಗಡೆ ದೊಡ್ಮನೆ, ನಮ್ಮ ಬದ್ಧತೆಯನ್ನು‌ ಧಾರ್ಮಿಕ, ದೇವಸ್ಥಾನಗಳ ಬಗ್ಗೆ ತೋರಬೇಕು. ಹತ್ತು‌ ಜನರ ಜವಬ್ದಾರಿ ಇಬ್ಬರು ಹೊರಬೇಕಾಗಿದೆ. ಇದನ್ನು ನಿತ್ಯ ಧಾರ್ಮಿಕ ಸಂಸ್ಕ್ರತಿ ಉಳಿಸಿ‌ ಮುನ್ನಡೆಯಬೇಕು ಎಂದರು.

  ನಾಟ್ಯ ವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ದೇವರ ದೇವ,‌ ಮಹಾದೇವನ ಬಳಿ ಶುದ್ಧ ಮನಸ್ಸಿನಿಂದ ‌ಮಾಡಿ ಹೊರಟರೆ ಯಶಸ್ವಿಯಾಗಿ ಪೂರ್ಣ ಮಾಡಿಕೊಳ್ಳಲಾಗುತ್ತದೆ. ನಮ್ಮ ಪ್ರತಿಷ್ಠೆ ಮಾಡದೇ ದೇವರ ಪ್ರತಿಷ್ಠೆ ಮಾಡಿದರೆ ಸಮಸ್ತ ಅಭಿವೃದ್ದಿ ಆಗುತ್ತದೆ. ಮನಸ್ಸಿನ ಪಾಪ ಕಳೆಯುವ ಲೋಕ ಪಾವನ ಪರಮೇಶ್ವರ ನೈಸರ್ಗಿಕ ಅಭಿಷೇಕ ಆಗುತ್ತದೆ‌ ಎಂಬುದೂ ವಿಶೇಷವಾಗಿದೆ ಎಂದರು.

  300x250 AD

  ಹೆಮ್ಮನಬೈಲು ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಕ, ಪ್ರಸಿದ್ದ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ರಾ. ಹೆಗಡೆ, ಪಂಚಾಯ್ತ‌ ಮಾಜಿ ಅಧ್ಯಕ್ಷ ಸೀತಾರಾಮ ಭಟ್ಟ, ಸಾಮಾಜಿಕ ಧುರೀಣ ಎನ್.ಎಲ್.ಗೌಡ, ಸೋವಿನಕೊಪ್ಪ ಪಂಚಾಯತ್ ಅಧ್ಯಕ್ಷ ‌ಮೋಹನ ಗೌಡ, ಸದಸ್ಯರಾದ ಗಿರೀಶ ಶೇಟ್, ಗಣಪತಿ ಗೌಡ, ಕಾರ್ಯದರ್ಶಿ ರಾಜು ಹೆಗಡೆ ಇತರರು ಇದ್ದರು. ಪ್ರಣವ ಭಟ್ ನಿರ್ವಹಿಸಿದರು.

  ಇದೇ ವೇಳೆ ಸಾಧಕರಾದ ಎನ್.ಜಿ.ಹೆಗಡೆ ಬೊಗ್ರಿಮಕ್ಕಿ ಅವರಿಗೆ ಸೇವಾ ಮಾಣಿಕ್ಯ ಹಾಗೂ ಕಲಾವಿದ‌ ಶಿವರಾಮ ನಾ. ಹೆಗಡೆ ಹುಟ್ಲಿ ಅವರನ್ನು ಕಲಿಯುಗದ ಧರ್ಮರಾಯ ಎಂದು‌ ಬಿರುದು ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ಕೂಡ ವಿತರಿಸಲಾಯಿತು.

  ಮುಂಜಾನೆ ವಿವಿಧ‌ ಧಾರ್ಮಿಕ ಕಾರ್ಯಕ್ರಮಗಳು, ರುದ್ರ‌ಕುಂಭಾಭಿಷೇಕ, ಶತರುದ್ರ‌ಮಹಾಯಾಗಗಳು ವಿ.ಮಂಜುನಾಥ ಭಟ್ಟ ಕಲ್ಲಾಳ ಇತರರು ನಡೆಸಿಕೊಟ್ಟರು.

  Share This
  300x250 AD
  300x250 AD
  300x250 AD
  Back to top