ಸಿದ್ದಾಪುರ: ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತ ಬಂದಿರುವ ಹಿತೇಂದ್ರ ನಾಯ್ಕ ಅವರು ಇಂದು ದೊಡ್ಮನೆ ಹೈ ಸ್ಕೂಲ್ ಗೆ ಅತೀ ಆವಶ್ಯಕತೆ ಇದ್ದ ಶುದ್ದ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ನೀಡಿದರು.
ಉದ್ಘಾಟನಾ ಕಾರ್ಯಕ್ರಮವನ್ನು ಮಕ್ಕಳಿಂದಲೇ ಉದ್ಘಾಟನೆ ಮಾಡಿಸಿ, ಇಂತ ನೂರಾರು ಕಾರ್ಯಕ್ರಮದ ಉದ್ಘಾಟನೆ ಮಾಡುವ ಮಟ್ಟಿಗೆ ನೀವು ಬೆಳೆಯಬೇಕು ಎಂದು ಮಕ್ಕಳನ್ನು ಹುರಿದುಂಬಿಸಿದರು.
ತಮ್ಮ ಪರಿವರ್ತನೆ ಎಂಬ ಟೀಮ್ ಮೂಲಕ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಅಭಿಯಾನ, ಕರೋನ ಮುಕ್ತ ಭಾರತ, ನಿಮ್ಮ ನೋವಿಗೆ ನಮ್ಮ ಧ್ವನಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಶಿರಸಿ – ಸಿದ್ದಾಪುರ ಸಂಪೂರ್ಣ ಬದಲಾಗಬೇಕು, ಆದರ್ಶ ತಾಲೂಕುಗಳು ಆಗಿ ಬದಲಾಗಬೇಕು, ಅಲ್ಲಿನ ಜನ ಜೀವನ ಬದಲಾಗಬೇಕು ಎಂಬುದು ಇವರ ಗುರಿಯಾಗಿದೆ. ಇದೆಲ್ಲಾ ಸಾಧ್ಯ ಆಗುವುದು ಕೇವಲ ಎಜುಕೇಷನ್ ಇಂದ. ಉತ್ತಮ ಎಜುಕೇಷನ್ ಎಂತ ವ್ಯಕ್ತಿಗಳನ್ನು ಯಾವ ಸ್ಥಾನಕ್ಕೆ ಬೇಕಾದರೂ ಕೊಂಡೊಯ್ಯುತ್ತದೆ. ವಿದ್ಯೆಗೆ ಬಡತನ ಸಿರಿತನ ಇಲ್ಲ. ವಿದ್ಯೆಯಿಂದ ನೀವು ಜಗತ್ತನ್ನು ಗೆಲ್ಲಬಹುದು ಎಂದರು.
ಅಲ್ಲಿನ ಶಾಲಾ ಸಮಿತಿ ಅವರನ್ನು ತುಂಬು ಹೃದಯದಿಂದ ಗೌರವಿಸಿತು.