• first
    second
    third
    previous arrow
    next arrow
  • ಕೇಂದ್ರ ಪರಿಸರ-ಅರಣ್ಯ ಮಂತ್ರಾಲಯಕ್ಕೆ ವೃಕ್ಷಲಕ್ಷ ಆಂದೋಲನದ ತಂಡ ಭೇಟಿ; ಮನವಿ ಸಲ್ಲಿಕೆ

    300x250 AD

    ಶಿರಸಿ:ಭಾರತ ಸರ್ಕಾರ ಪರಿಸರ ಅರಣ್ಯ ಮಂತ್ರಾಲಯ ಕಛೇರಿಗೆ (ದಕ್ಷಿಣ ಭಾರತ ಪ್ರಾದೇಶಿಕ ಕಛೇರಿ) ಇತ್ತೀಚಿಗೆ ಮಾ.22 ಭೇಟಿ ನೀಡಿದ ವೃಕ್ಷ ಲಕ್ಷ ಆಂದೋಲನದ ತಂಡ ಪಶ್ಚಿಮ ಘಟ್ಟದ ಜ್ವಲಂತ ಪರಿಸ್ಥಿತಿ ಬಗ್ಗೆ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಫ್ ಫಾರೆಸ್ಟ ಕೆ.ಪಿ. ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಿತು.

    “ಬೆಟ್ಟಗಳ ಸಂರಕ್ಷಣೆ ಬೆಳೆಗಾರರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ. ಮಲೆನಾಡಿನ ಹಳ್ಳಿಗಳ ನೈಸರ್ಗಿಕ ಸಾಮೂಹಿಕ ಹಸಿರು ಪಟ್ಟಿ ಎಂದು ಹೆಸರು ಪಡೆದಿರುವ ಬೆಟ್ಟ, ಕಾನುಗಳು, ಡೀಮ್ಡ್ ಅರಣ್ಯಗಳ ಸಂರಕ್ಷಣೆಗೆ ಅಭಿವೃದ್ಧಿಗೆ ಕೇಂಧ್ರ ಸರ್ಕಾರ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಯೋಜನೆ ಪ್ರಕಟಿಸಬೇಕು ಎಂದು ತಳ ಮಟ್ಟದ ಸ್ಥಿತಿಗತಿ ಬಗ್ಗೆ ಜೀವ ವೈವಿಧ್ಯಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ, ಅಶೀಸರ ಮಾಹಿತಿ ನೀಡಿದರು.

    ಎತ್ತಿನಹೊಳೆ ನದೀ ತಿರುವು ಯೋಜನೆ ವಿಫಲವಾಗಿದೆ. ಅಲ್ಲಿ ನೀರೇ ಇಲ್ಲ. ಆದರೆ ಎತ್ತಿನಹೊಳೆ ಗುಂಡ್ಯ ಹೊಳೆ ಅರಣ್ಯಗಳು ನಾಶವಾಗಿವೆ. ಬೇಡ್ತಿ, ವರದಾ ನದೀ ತಿರುವು, ಕಾಳಿ ನದೀ ತಿರುವು ಯೋಜನೆಗಳ ತಯಾರಿ ನಡೆದಿದೆ. ಇದು ನದೀ ಅರಣ್ಯಗಳ ವಿನಾಶಕ್ಕೆ ಕಾರಣವಾಗಲಿವೆ. ಈ ಕಣಿವೆಗಳ ಜನತೆ ಅತಂತ್ರರಾಗುತ್ತಾರೆ.ಕೇಂದ್ರ ಪರಿಸರ ಅರಣ್ಯ ಮಂತ್ರಾಲಯ ಇದಕ್ಕೆ ಅವಕಾಶ ನೀಡಬಾರದು. ಪಶ್ಚಿಮ ಘಟ್ಟದ ಅಕ್ರಮ ಗಣಿಗಾರಿಕೆಗೆ ತಡೆ ಹಾಕಬೇಕು ಎಂದು ಮನವಿ ಮಾಡಿದರು.

    300x250 AD

    ಕಾಳಿ ಕಣಿವೆಯಲ್ಲಿ ಈಗಾಗಲೇ 7 ಬೃಹತ್ ಆಣೆಕಟ್ಟುಗಳಿವೆ. ಕಾಳಿ ಕಣಿವೆ ಛಿದ್ರಗೊಳಿಸುವ ಇನ್ನಷ್ಟು ಯೋಜನೆಗಳನ್ನು ತಾಳಿಕೊಳ್ಳುವ ಪರಿಸರ ಧಾರಣಾ ಸಾಮಥ್ರ್ಯ ನದೀ ಕಣಿವೆಗೆ ಇಲ್ಲ ಎಂಬ ಅಂಶವನ್ನು ಕೇಂದ್ರ ಪರಿಸರ ಅರಣ್ಯ ಮಂತ್ರಾಲಯದ ಉನ್ನತ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು. ಕಾಳಿ ನದೀ ತಿರುವು ಹಾಗೂ ಬೇಡ್ತಿ ವರದಾ ನದೀ ತಿರುವು ಯೋಜನೆಗಳಿಗೆ ಉ.ಕ. ಜಿಲ್ಲೆಯ ಜನತೆ ತೀವ್ರ ವಿರೋಧ ವ್ಯಕ್ತ ಪಡಿಸಿದೆ. ಎಂಬ ಅಂಶವನ್ನು ಅಶೀಸರ ಅವರು ಪರಿಸರ ಅರಣ್ಯ ಮಂತ್ರಾಲಯದ ಉನ್ನತ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು.

    ಈ ಸಂದರ್ಭ ಪರಿಸರ ತಜ್ಞ ಡಾ. ಸುಹಾಸ್, ಡಾ. ಮಹೇಶ ಕುಮಾರ್ ಅಂಜನ್ ಕುಮಾರ ಅವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top