• first
    second
    third
    previous arrow
    next arrow
  • ಮಾ.28ಕ್ಕೆ ಗೇರಸೊಪ್ಪದಲ್ಲಿ ಅರಣ್ಯವಾಸಿಗಳ ಸ್ಫಂದನ ಕಾರ್ಯಕ್ರಮ

    300x250 AD

    ಹೊನ್ನಾವರ: ಅರಣ್ಯವಾಸಿಗಳನ್ನು ಉಳಿಸಿ-ಜಾಥದ ಅಂಗವಾಗಿ ಮಾ. ೨೮ ರ ಸೋಮವಾರ ಮುಂಜಾನೆ ೧೦:೩೦ ಘಂಟೆಗೆ ತಾಲೂಕಿನ ಗೇರಸೊಪ್ಪ ಅರಣ್ಯ ವಲಯ ವ್ಯಾಪ್ತಿಯ ಅತಿಕ್ರಮಣದಾರರ ಸಮಸ್ಯೆಗಳಿಗೆ ಸ್ಫಂದನ ಕಾರ್ಯಕ್ರಮ ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಕಛೇರಿ ಆವರಣದಲ್ಲಿ ಜರುಗಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಂಚಾಲಕರಾದ ರಾಮು ಮರಾಠಿ ಯಲಕೊಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅರಣ್ಯವಾಸಿಗಳ ಕಾನೂನಾತ್ಮಕ ಸಮಸ್ಯೆ, ಸಾಗುವಳಿ ಹಕ್ಕು ಮಂಜೂರಿ ಪ್ರಕ್ರೀಯೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ, ಅತೀಕ್ರಮಣದಾರರ ಸಾಗುವಳಿಗೆಗೆ ಸಂಬಂಧ ಪಟ್ಟಂತೆ ಉಂಟಾಗುತ್ತಿರುವ ತೊಂದರೆ, ಮಂಜೂರಿ ಸಮಸ್ಯೆಗಳಿಗೆ ಅರಣ್ಯ ಅಧಿಕಾರಿಯೊಂದಿಗೆ ಸ್ಫಂದಿಸುವ ಉದ್ದೇಶದಿಂದ ಸದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    300x250 AD

    ಹಿರಿಯ ಅರಣ್ಯ ಅಧಿಕಾರಿಗಳು ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಉಪಸ್ಥಿತರಿಸುವ ಕಾರ್ಯಕ್ರಮದಲ್ಲಿ ಆಸಕ್ತ ಅರಣ್ಯ ಅತಿಕ್ರಮಣದಾರರು ಭಾಗವಹಿಸುವಂತೆ ರಾಮು ಮರಾಠಿ ಯಲಕೊಟಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Back to top