
ಶಿರಸಿ: ಇಲ್ಲಿನ ಅಡಿಕೆ ಕಾಳು ಮೆಣಸು ಹಾಗೂ ಯಾಲಕ್ಕಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ವಿವೇಕಾನಂದ ಆರ್.ಕಾಮತ್ ಹಾಗೂ ಸದಸ್ಯ ವಿನಯಕುಮಾರ ಹೆಗಡೆ ಇವರು ಸಂಘದ ವತಿಯಿಂದ ಕರ್ನಾಟಕ ಅರೇಕಾ ಛೇಂಬರ್ ಆಫ್ ಕಾಮರ್ಸ್ ಆಡಳಿತ ಮಂಡಳಿ ನಿರ್ದೇಶಕರಾಗಿ ಮುಂದಿನ ಎರಡು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಅರೇಕಾ ಛಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾಗಿ ಭೀಮಸಮುದ್ರದ ಹಿರಿಯ ಅಡಿಕೆ ವ್ಯಾಪಾರಸ್ಥ ಜಿ.ಎಂ ಪ್ರಸನ್ನಕುಮಾರ ಮತ್ತು ಉಪಾಧ್ಯಕ್ಷರಾಗಿ ಯಲ್ಲಾಪುರದ ಅಡಿಕೆ ವ್ಯಾಪಾರಸ್ಥ ಮಾರುತಿ ಶಿವರಾಮ ಗಟ್ಟಿ ಹಾಗೂ ಸಾಗರದ ಅಶ್ವಿನ್ ಕುಮಾರ, ಕಾರ್ಯದರ್ಶಿಯಾಗಿ ಶಿವಕುಮಾರ ಪಟೇಲ್ ಆಯ್ಕೆಗೊಂಡಿದ್ದಾರೆ ಎಂದು ತಿಳಿಸಲಾಗಿದೆ.