• first
  second
  third
  previous arrow
  next arrow
 • ಭತ್ತವನ್ನು ಮಾರುಕಟ್ಟೆಗೆ ಸಾಗಾಟ ಮಾಡಲಾಗದೇ ಅತಂತ್ರ;ದಾರಿ ತೆರವುಗೊಳಿಸುವಂತೆ ಮನವಿ

  300x250 AD

  ಯಲ್ಲಾಪುರ: ಗ್ರಾಮಸ್ಥರಿಬ್ಬರು ದಾರಿ ಬಂದ್ ಮಾಡಿದ ಹಿನ್ನೆಲೆಯಲ್ಲಿ, ಸಜ್ಜುಮಾಡಿ ಮೂಟೆ ಕಟ್ಟಿಟ್ಟ ಭತ್ತವನ್ನು ಮಾರುಕಟ್ಟೆಗೆ ಸಾಗಾಟ ಮಾಡಲಾಗದೇ ಅತಂತ್ರವಾಗಿದೆ. ಕೂಡಲೇ ದಾರಿ ತೆರವು ಮಾಡಿಕೊಡಲು ಕ್ರಮ ಕೈಹೊಳ್ಲಬೇಕೆಂದು ಬೇಕೆಂದು ತಾಲೂಕಿನ ಉಚಗೇರಿ ಮಜ್ಜಿಗೆಹಳ್ಳದ ರೈತರಯ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹಾಗೂ ಪಿಐ ಸುರೇಶ ಯಳ್ಳೂರ ಅವರಿಗೆ ಮನವಿ ಸಲ್ಲಿಸಿದರು.

  ಮಂಚಿಕೇರಿ ಹೋಬಳಿಯ ಉಚಗೇರಿಯ ಮಜ್ಜಿಗೆಹಳ್ಳದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಅತಿಕ್ರಮಣ ಭೂಮಿ ಸಾಗುವಳಿ ಮಾಡಿಕೊಂಡಿದ್ದೇವೆ. ನಮ್ಮ ಜಮೀನಿನ ಬಳಿಯಲ್ಲಿ ಜಮೀನು ಹೊಂದಿದ ಇಬ್ಬರು ರೈತರ ಜಮೀನಿನಿಂದಲೇ ನಾವು ಓಡಾಟ ಮಾಡಬೇಕಾಗಿದೆ. ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆಯವರು ದಾರಿಗಾಗಿ ಮಾಡಿದ ಜಿ.ಪಿ.ಎಸ್ ಸ್ಥಳದಿಂದಲೇ ನಾವು ಓಡಾಡುತ್ತಿದ್ದೆವು.
  ಹಿಂದೆ ಇಲ್ಲದ ತಂಟೆ ತಕರಾರು ಈಗ ಶುರುವಾಗಿದ್ದು, ಅವರು ನಮ್ಮ ಓಡಾಟದ ದಾರಿ ಬಂದ್ ಮಾಡಿದ್ದಾರೆ. ಇದರಿಂದ ಈ ಬಾರಿಯ ಭತ್ತದ ಫಸಲು ಇನ್ನೂ ಕಣದಲ್ಲೇ ಇದೆ. ಕಳೆದ 3-4 ದಿನದಿಂದ ಮಳೆಯ ಆತಂಕವೂ ಇದೆ. ಕಷ್ಟಪಟ್ಟು ದುಡಿದ ಫಸಲು ಹಾಳಾಗುವ ಅಪಾಯ ಇದೆ.
  ಭತ್ತ ಸಾಗಾಟ ಮಾಡಲು ಮತ್ತು ನಿತ್ಯದ ಅಗತ್ಯ ಓಡಾಟದ ದಾರಿಯ ಕಿರಿಕಿರಿ ತಪ್ಪಿಸಿ ನಿರಾತಂಕವಾಗಿ ಓಡಾಡಲು ರಸ್ತೆಗೆ ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
  ಮಜ್ಜಿಗೆಹಳ್ಳದ ನಿವಾಸಿಗಳಾದ ಕೋಂಡು ಜಾನು ಪಾಟೀಲ್, ಬಾಬು ಪಾಟೀಲ್, ಬಾಗು ಪಾಟೀಲ್ ನಾನು ಪಾಟೀಲ್ ಇತರರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top