• first
  second
  third
  previous arrow
  next arrow
 • ಪತಂಜಲಿ ಯೋಗ ಸಮಿತಿಯಿಂದ ಬಲಿದಾನ ದಿವಸ ಆಚರಣೆ

  300x250 AD

  ಯಲ್ಲಾಪುರ: ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಬಲಿದಾನ ದಿವಸ ಕಾರ್ಯಕ್ರಮವನ್ನು ಬುಧವಾರದಂದು ಪಟ್ಟಣದ ಅಡಿಕೆ ಭವನದಲ್ಲಿ ಆಚರಿಸಲಾಯಿತು.

  ಬಲಿದಾನ ದಿವಸ ಅಂಗವಾಗಿ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಗತಸಿಂಗ್, ಸುಖದೇವ್ ಹಾಗೂ ರಾಜಗುರು ಅವರ ಬಲಿದಾನದ ಸ್ಮರಣೆ ಮಾಡಲಾಯಿತು.

  ಜಿಲ್ಲಾ ಯೋಗ ವಿಸ್ತಾರದ ಸುಬ್ರಾಯ ಭಟ್ ಮಾತನಾಡಿ, ಭಗತ್ ಸಿಂಗ್ ಸುಖದೇವ್ ರಾಜಗುರು ಇವರು ಚಿಕ್ಕವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಬಲಿದಾನ ಮಾಡಿದ್ದರು. ಅವರ ತ್ಯಾಗದ ಪ್ರತಿಯಾಗಿ ಪಡೆದ ಸ್ವಾತಂತ್ರ್ಯದ ಋಣ ತೀರಿಸಲು ಇಂದು ನಾವು ನಮ್ಮ ಮಕ್ಕಳನ್ನು ದೇಶ ರಕ್ಷಣೆಗಾಗಿ ಸಿದ್ಧಗೊಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದರ ಜೊತೆಗೆ ಭಾರತೀಯ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ನೀಡಿ ಭಾರತ ಭಾರತೀಯರ ರಕ್ಷಣೆಗೆ ಕಂಕಣಬದ್ಧರಾಗಿವಂತೆ ತಯಾರಿಸಬೇಕಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ದೇಶಭಕ್ತಿ ಹಾಗೂ ಭಾರತೀಯ ಸಂಸ್ಕಾರ ಕಲಿಸುವ ಮೂಲಕ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ಹೇಳಿದರು.

  300x250 AD

  ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ತಾಲೂಕ ಅಧ್ಯಕ್ಷ ವಿ.ಕೆ.ಭಟ್ ಶೀಗೆಪಾಲ್, ಉಪಾಧ್ಯಕ್ಷ ನಾಗೇಶ ರಾಯ್ಕರ, ಪತಂಜಲಿ ಯುವ ಭಾರತಿ ಜಿಲ್ಲಾ ಪ್ರಭಾರಿ ಹಾಗೂ ಶಿಕ್ಷಕ ದಿವಾಕರ ಮರಾಠಿ, ಜಿಲ್ಲಾ ಯುವ ಸಹ- ಪ್ರಭಾರಿ ಕನಕಪ್ಪ, ಯೋಗ ಬಂಧುಗಳಾದ ರವಿ ಪೆÇೀಕಳೆ, ಮಂಜುನಾಥ ಹೆಗಡೆ, ಎಸ್.ಡಿ.ನಾಯಕ, ಗಂಗಾ ಭಟ್ಟ, ಕಾವೇರಿ ಮುಂತಾದವರು ಭಾರತಮಾತೆಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿದರು.

  Share This
  300x250 AD
  300x250 AD
  300x250 AD
  Back to top