• first
  second
  third
  previous arrow
  next arrow
 • ಬಿಜೆಪಿ ಯುವ ಮೋರ್ಚಾದಿಂದ ಪಂಜಿನ ಮೆರವಣಿಗೆ

  300x250 AD

  ಭಟ್ಕಳ: ಕ್ರಾಂತಿಕಾರಿ ತ್ರಿವಳಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್‍ರವರ ಬಲಿದಾನ ದಿನದ ಸ್ಮರಣಾರ್ಥ ಶಹೀದ್ ದಿವಸ್ ಅನ್ನು ಬಿಜೆಪಿ ಯುವ ಮೋರ್ಚಾ ತಾಲೂಕು ಘಟಕದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

  ಪಂಜಿನ ಮೆರವಣಿಗೆಯೂ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭಗೊಂಡು ಹೂವಿನ ಪೇಟೆ ಮಾರ್ಗವಾಗಿ ಮುಖ್ಯ ರಸ್ತೆಯಿಂದ ಮಾರಿಗುಡಿ ದೇವಸ್ಥಾನ ಮೂಲಕ ಹಳೆ ಬಸ್ ನಿಲ್ದಾಣದಿಂದ ಪೇಟೆ ಮುಖ್ಯ ರಸ್ತೆಯಿಂದ ಸಂಶುದ್ದೀನ್ ಸರ್ಕಲ್ ನಿಂದ ವಾಪಸ್ಸು ಪ್ರವಾಸಿ ಮಂದಿರಕ್ಕೆ ಮುಕ್ತಾಯಗೊಂಡಿತು.

  ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ ಮಾತನಾಡಿ, ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ಆಡಳಿತ ವೇಳೆ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ನಿಜವಾದ ದೇಶ ಭಕ್ತರು ಯಾರೆಂಬುದೇ ಅರಿವಿಗೆ ಬರಲು ಬಿಡಲಿಲ್ಲ. ಹಾಗೂ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಅಂದಿನ ಕಾಂಗ್ರೆಸ್ ಸರಕಾರ ಕೆಟ್ಟ ರೀತಿಯಲ್ಲಿ ಕ್ರಾಂತಿಕಾರಿಗಳಾಗಿ ಬಿಂಬಿಸಿದ್ದರು. ಅತೀ ಚಿಕ್ಕ ವಯಸ್ಸಿನಲ್ಲೇ ದೇಶ ಪ್ರೇಮವನ್ನು ತುಂಬಿಕೊಂಡಿರುವ ಇವರುಗಳ ಸಾಧನೆ ಅಪಾರ. ಆದರೆ ಇತಿಹಾಸದಲ್ಲಿ ಇವರುಗಳ ಬಗ್ಗೆ ದುಷ್ಟರ ರೀತಿ ತೋರ್ಪಡಿಸಿರುವುದು ನಮ್ಮ ದೇಶದ ವಿಪರ್ಯಾಸವಾಗಿದೆ ಎಂದರು.

  300x250 AD

  ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ನಾಯ್ಕ ಮಾತನಾಡಿ, ದೇಶಕ್ಕಾಗಿ ಬಲಿದಾನವಾದ ಭಗತ್ ಸಿಂಗ್ ಅವರು ಇಂದಿಗೂ ನಮ್ಮ ಯುವ ಜನತೆಗೆ ಪ್ರೇರಣಾಶಕ್ತಿಯಾಗಿದ್ದಾರೆ. ಅವರು ನಮ್ಮೊಂದಿಗೆ ಇರುವುದು ಇದುವೇ ದೊಡ್ಡ ಕಾರಣವಾಗಿದೆ. ಲಕ್ಷಕ್ಕೂ ಅಧಿಕ ಮಂದಿ ಸ್ವಾತಂತ್ರ್ಯಕ್ಕೆ ಹೋರಾಡಿ ಬಲಿಯಾಗಿದ್ದರು ಸಹ ಈ ಮೂವರು ಮಾತ್ರ ವಿಶೇಷವಾಗಿ ನೆನಪಿಗೆ ಬರುತ್ತಾರೆಂದರೆ ಅವರ ವಿಚಾರಧಾರೆ, ಧೈರ್ಯ ದೇಶದೆಲ್ಲೆಡೆ ಪಸರಿಸಿರುವುದು ದೊಡ್ಡ ಉದಾಹರಣೆಯಾಗಲಿದೆ ಎಂದರು.

  ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಈ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Back to top