ಶಿರಸಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಚೆಸ್ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ‘ಯುನಿವರ್ಸಿಟಿ ಬ್ಲೂ’ ಆಗಿ ಇದೀಗ ಏಪ್ರೀಲ್1 ರಿಂದ 03 ರವರೆಗೆ ತಮಿಳುನಾಡಿನ SRM University ಯಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಸ್ಫರ್ಧೆಗೆ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ ಶಾನಭಾಗ, ಪೂರ್ಣಿಮಾ.ವಿ.ಗುಡಿಗಾರ ಮತ್ತು ಸಿಂಚನಾ.ವಿ. ಹೆಗಡೆ ತೆರಳಿದ್ದಾರೆ.
ಇವರ ಸಾಧನೆಗೆ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರಮನ್ ವರೀಂದ್ರ ಕಾಮತ್, ಪ್ರಾಚಾರ್ಯ ಡಾ.ಎಸ್ ಕೆ ಹೆಗಡೆ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.