ಶಿರಸಿ:ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಡಿ. 2021ರ ಮಾಹೆಯಲ್ಲಿ ನಡೆದ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ಫಲಿತಾಂಶದಲ್ಲಿ ಜನನಿ ಮ್ಯೂಸಿಕ್( ರಿ) ಶಿರಸಿಯ ವಿದುಷಿ ರೇಖಾ ದಿನೇಶ ಶಿರಸಿ ಇವರ ಶಿಷ್ಯೆಯಾದ ಸ್ನೇಹಾ ಚಂದ್ರಶೇಖರ ಅಮ್ಮಿನಳ್ಳಿ ಇವಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸೀನಿಯರ್’ ವಿಭಾಗದಲ್ಲಿ ಹೆಚ್ಚಿನ ಅಂಕವನ್ನು ಗಳಿಸಿ ಶಿರಸಿ ಸೆಂಟರ್ ಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.ನಮ್ಮ ಸಂಸ್ಥೆಗೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ದಿನೇಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಗೀತದ ಸೀನಿಯರ್ ವಿಭಾಗದಲ್ಲಿ ಜನನಿ ಮ್ಯೂಸಿಕ್ ವಿದ್ಯಾರ್ಥಿನಿ ಪ್ರಥಮ
