ಭಟ್ಕಳ: ತಾಲೂಕಾದ್ಯಂತ ಅರಣ್ಯ ಸಿಬ್ಬಂದಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಅತೀಕ್ರಮಣದಾರರ ಕೃಷಿ ಸಾಗುವಳಿಗೆಗೆ ವ್ಯಾಪಕವಾದ ಆತಂಕ ಜರುಗಿಸಿ, ದೌರ್ಜನ್ಯ ವೆಸಗಿರುವ ಕಾನೂನು ಬಾಹಿರ ಕೃತ್ಯ ಖಂಡನಾರ್ಹ. ತಕ್ಷಣ ಅರಣ್ಯ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಉಸ್ತುವಾರಿ ಸಚಿವರಿಗೆ ಅಗ್ರಹಿಸಿದ್ದಾರೆ.
ತಾಲೂಕಾದ್ಯಂತ ಹತ್ತಕ್ಕಿಂತ ಹೇಚ್ಚು ವಿವಿಧ ಪ್ರದೇಶದಲ್ಲಿ ಅರಣ್ಯವಾಸಿಗಳ ಸಾಗುವಳಿ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿಗಳು ದೌರ್ಜನ್ಯವೆಸಗಿ ಅರಣ್ಯವಾಸಿಗಳಿಗೆ ಆತಂಕ ಉಂಟುಮಾಡಿರುವ ಚಿತ್ರವನ್ನ ಬಿಡುಗಡೆಗೊಳಿಸುತ್ತಾ ಮೇಲಿನಂತೆ ಅವರು ಉಸ್ತುವಾರಿ ಸಚಿವರಿಗೆ ಅಗ್ರಹಿಸಿದ್ದಾರೆ.
ಬೆಳಕೆಯ ನಾರಾಯಣ ತಿಮ್ಮಪ್ಪ ನಾಯ್ಕ, ಶ್ರೀಧರ ತಿಮ್ಮಪ್ಪ ನಾಯ್ಕ, ಚಂದ್ರು ನಾಯ್ಕ, ಮಾದೇವ ನಾಯ್ಕ, ಶಿವಪ್ಪ ನಾಯ್ಕ ಮುಂತಾದ ಅರಣ್ಯ ಅತೀಕ್ರಮಣದಾರರ ಸಾಗುವಳಿ ಭೂಮಿಗೆ ಸಂಬAಧಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಮಂಜೂರಿಗೆ ಸಂಬಂಧಿಸಿ ಜಿಪಿಎಸ್ ಆಗಿರುವಂತಹ ಕ್ಷೇತ್ರದಲ್ಲಿ ಸಾಗುವಳಿಗೆಗೆ ಆತಂಕ ಉಂಟುಮಾಡಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದರು.
ಕಾನೂನು ಮತ್ತು ಸರಕಾರದ ಆದೇಶ ಉಲ್ಲಂಘನೆ : ರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಆತಂಕ ಉಂಟುಮಾಡಬಾರದೆಂಬ ಸರಕಾರದ ಮತ್ತು ಕಾಯಿದೆಯಲ್ಲಿ ಸ್ಪಷ್ಟ ಉಲ್ಲೇಖ ಮತ್ತು ನಿರ್ಧೇಶನ ಇದ್ದಾಗಲೂ ಅರಣ್ಯ ಸಿಬ್ಬಂದಿಗಳು ಪದೇ ಪದೇ ಕಾನೂನು ಉಲ್ಲಂಘಿಸಿರುವುದು ವಿಷಾದಕರ ಎಂದು ರವೀಂದ್ರ ನಾಯ್ಕ ಹೇಳಿದರು.