• first
    second
    third
    previous arrow
    next arrow
  • ಅಡುಗೆ ಅನಿಲ, ಅಡುಗೆ ಎಣ್ಣೆ ಏರಿಕೆಯಿಂದ ಮಹಿಳೆಯರಿಗೆ ಸಂಕಷ್ಟ

    300x250 AD

    ಶಿರಸಿ:ರಾಜ್ಯ,ದೇಶದಲ್ಲಿ ಅಡುಗೆ ಅನಿಲ ಹಾಗೂ ಅಡುಗೆ ಎಣ್ಣೆ ದರ ಬಹಳ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿಶೇಷವಾಗಿ ಸಾಮಾನ್ಯ ಮಹಿಳೆಯರಿಗೆ ಬಹಳ ಸಂಕಷ್ಡ ಎದುರಾಗಿದೆ, ಜೀವನ ನಿರ್ವಹಣೆಯೇ ಸವಾಲಾಗಿದೆ ಎಂದು ಡಿಸಿಸಿ ಮಹಿಳಾ ಪ್ರಧಾನಕಾರ್ಯದರ್ಶಿ, ರಾಜ್ಯ ಲೀಗಲ ಸೆಲ ಕಾರ್ಯದರ್ಶಿ ಜ್ಯೋತಿ ಪಾಟೀಲ್ ಆಕ್ಷೇಪಿಸಿದ್ದಾರೆ.

    ಅಡುಗೆ ಅನಿಲವು ಮತ್ತೆ 50 ರೂ ಏರಿದ್ದು 1000ರೂ ಸಮೀಪಿಸಿದೆ.ಇದರಿಂದ ಬಡವರು,ಮಧ್ಯಮವರ್ಗದವರಿಗೆ ದೊಡ್ಡ ಹೊರೆಯಾಗಿದೆ. ಕೋರೊನ ಸಂಕಟದಿಂದ ಎರಡು ವರುಷ ಬಳಲಿದ ಜನರಿಗೆ ದೊಡ್ಡ ಹೊರೆಯಾಗಿದೆ. ಮುಖ್ಯವಾಗಿ ಎರಡು ತಿಂಗಳಲ್ಲಿ ಅಡುಗೆ ಎಣ್ಣೆ ಬಹಳ ಏರಿದ್ದು. ಬಡಜನರು.ಹೊಟೆಲ.ಸಣ್ಣ ಅಂಗಡಿಕಾರರಿಗೆ ಕಷ್ಟವಾಗಿದೆ. ಹೊಟೆಲಗಳಲ್ಲೂ ತಿಂಡಿ ದರ ಏರಿಕೆಯಾಗುವಂತಾಗಿದೆ. ರಾಜ್ಯ ಸರಕಾರವು ಅಡುಗೆ ಅನಿಲ, ಅಡುಗೆ ಎಣ್ಣೆ ಕರ ಇಳಿಸಿದರೆ ಜನರಿಗೆ ಆಗುವ ಹೊರೆ ತಪ್ಪಿಸಬಹುದಾಗಿದೆ. ಚುನಾವದೆ ಬಂದಾಗ ಸ್ವಲ್ಪಇಳಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ನಿಲ್ಲಬೇಕು ಎಂದು ಅವರು ತಿಳಿಸಿದ್ದಾರೆ.

    300x250 AD

    ಮುಖ್ಯವಾಗಿ 2 ತಿಂಗಳಿನಿಂದ ಡಿಸೆಲ್ ಪೆಟ್ರೊಲ್ ದರ ಒಮ್ಮೆಲೆ 15-20 ರೂ ಏರಿಸಿ ಜನರಿಗೆ ಆಘಾತ ನೀಡಿದ್ಸ ಎರಡು ಸರಕಾರಗಳು ಐದು ರಾಜ್ಯದ ಚುನಾವಣೆ ಕಾರಣಕ್ಕೆ ಸ್ವಲ್ಪ ಇಳಿಸಿದಂತೆ ಮಾಡಿದರು.ಫಲಿತಾಂಶ ಬಂದನಂತರ ಏರಿಸುವ ಕಾರ್ಯ ಅರಂಭಿಸಿದ್ದಾರೆ. ಪರೋಕ್ಣವಾಗಿ ನಿತ್ಯ ಬಳಕೆ ವಸ್ತುಗಳು, ಅಹಾರ ವಸ್ತುಗಳ ಬೆಲೆಯು ಏರುವಂತಾಗಿದೆ. ಸರಕಾರ ಮಧ್ಯಪ್ರವೇಶಿಸಿ, ದರ ನಿಯಂತ್ರಣ ಮಾಡದೇ ಹೋದರೆ ಮಹಿಳೆಯರನ್ನು ಸೇರಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top