ಹೊನ್ನಾವರ: ತಾಲೂಕಿನ ಕರ್ಕಿ ಮೂಲದ ಪ್ರಸ್ತುತ ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೌರಿ ಮಾಳ್ಸೇಕರ್ ಅವರಿಗೆ ಪ್ರತಿಷ್ಠಿತ ಮದರ್ ತೆರೆಸಾ ಪ್ರಶಸ್ತಿಗೆ ಲಭಿಸಿದೆ.
ದಾವಣಗೆರೆಯ ನೌಕರರ ಸಭಾಭವನದಲ್ಲಿ ಭಾರತೀಯ ಕಲಾ ಸಾಂಸ್ಕøತಿಕ ಅಕಾಡೆಮಿ ನಡೆಸಿದ ಸಮಾರಂಭದಲ್ಲಿ ಗೌರಿ ರಾಮದಾಸ್ ಮಾಳ್ಸೇಕರ ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿ ಅವರಿಗೆ ವೈದ್ಯಕೀಯ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ದಾವಣಗೆರೆ ಮಠದ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ವಿವಿಧ ಕ್ಷೇತ್ರದ ಮುಖ್ಯಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು. ತಾಲೂಕಿನವರಿಗೆ ಮದರ್ ತೆರೆಸಾ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.