ಹೊನ್ನಾವರ: ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಅಳ್ಳಂಕಿ ಶಾಖೆಯಿಂದ ಸಂಘದ ಸದಸ್ಯತ್ವ ಹೊಂದಿರುವ ಮೃತಪಟ್ಟ ಈರ್ವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.
ತಾಲೂಕಿನ ಹಡಿನಬಾಳದ ಶ್ರೀಮಹಾಲಕ್ಷ್ಮೀ ಸೇಫ್ ಸ್ಟಾರ ಸ್ವ ಸಹಾಯ ಸಂಘ ಸದಸ್ಯೆ ಈರಮ್ಮ ಸುಬ್ರಾಯ ಆಚಾರಿಯವರು ಆಕಸ್ಮಿಕ ಎದೆ ನೋವಿನಿಂದ ಮರಣ ಹೊಂದಿದ್ದರು. ಇವರ ಪತಿ, ಸುಬ್ರಾಯ ಆಚಾರಿ ಅವರಿಗೆ ಹಾಗೂ ಮಾಳಕೊಡದ ಶ್ರೀಸದ್ಗುರು ಶ್ರೀಧರ ಸೇಫ್ ಸ್ಟಾರ್ ಜಂಟಿ ಭಾದ್ಯತಾ ಸಂಘದ ಸದಸ್ಯೆ ಗೌರಿ ಅಂಬಿಗರವರು ಪಾಶ್ರ್ವವಾಯುದಿಂದ ಮರಣ ಹೊಂದಿದ್ದು, ಇವರ ಮಗಳಾದ ಶಾಂತಿ ಅಂಬಿಗ ಇವರಿಗೆ ಸಹಕಾರಿ ಸೌಲಭ್ಯಗಳಲ್ಲಿ ಒಂದಾದ ಜೀವನ ಮೌಲ್ಯ ನಿಧಿಯಿಂದ ರೂ.50,000 ಚೆಕ್ ನೀಡಿದರು.
ಸಹಕಾರಿಯ ಅಳ್ಳಂಕಿ ಶಾಖೆಯ ಬಿಡಿಸಿ ನಿರ್ದೇಶಕ ಸುಬ್ರಾಯ ನಾಯ್ಕ ಹಾಗೂ ವ್ಯೆದ್ಯ ವಿಶ್ವೇಶ್ವರ ಅಯ್ಯ ಮತ್ತು ಕಟ್ಟಡದ ಮಾಲೀಕ ಉದಯಕುಮಾರ್ ಹೆಗಡೆ, ಶಾಖಾ ವ್ಯವಸ್ಥಾಪಕ ಸತೀಶ ಗೌಡ ಮತ್ತು ಶಾಖಾ ಸಿಬ್ಬಂದಿ ಹಾಗೂ ಗ್ರಾಹಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಫೀಲ್ಡ್ ಆಫೀಸರ್ ಮಾದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.