ಮುಂಡಗೋಡ: ಸ್ಥಳೀಯ ಗ್ರಾಮಸ್ಥರು ಜಿಂಕೆಯನ್ನು ಬೀದಿ ನಾಯಿಗಳ ದಾಳಿಯಿಂದ ರಕ್ಷಿಸಿದ ಘಟನೆ ನಡೆದಿದೆ.
ಕಾಡಿನಿಂದ ನಾಡಿಗೆ ಆಹಾರವನ್ನು ಅರಸಿ ಬಂದಿದ್ದ ಜಿಂಕೆಯೊoದನ್ನು ಬೀದಿನಾಯಿಗಳ ಗುಂಪು ಬೆನ್ನಟ್ಟಿ ಗಾಯಗೊಳಿಸಲು ಪ್ರಯತ್ನಿಸಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು, ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದ್ದಾರೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತ ರಾಜು ಗುಬ್ಬಕ್ಕನವರ ಅರಣ್ಯ ಇಲಾಖೆಗೆ ದೂರವಾಣಿ ಕರೆಮಾಡಿ ಕರೆಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಔಷಧೋಪಚಾರ ಮಾಡಿ ಜಿಂಕೆಯನ್ನು ಕಾಡಿಗೆ ಬಿಟ್ಟಿದ್ದಾರೆ. ಸಂತೋಷ ತಂಬಿ, ಮಾಲತೇಶ ಸುಣಗಾರ, ರವಿ(ಪ್ಲಾಟ್), ಸಚಿನ ಹೊಸಮನಿ ಮುಂತಾದವರು ಈ ವೇಳೆ ಇದ್ದರು.