• first
  second
  third
  previous arrow
  next arrow
 • ಮಾರಿಕಾಂಬಾ ದೇವಿಯ ಅನ್ನ ಪ್ರಸಾದ ಸ್ವೀಕರಿಸಿದ ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು

  300x250 AD

  ಶಿರಸಿ: ಮಾರಿಕಾಂಬಾ ದೇವಿಯ ಜಾತ್ರೆ ಯ ಪ್ರಯುಕ್ತ ಅನ್ನಪೂರ್ಣೇಶ್ವರಿ ಸೇವಾ ಸಮಿತಿ ವತಿಯಿಂದ ನಡೆಯುತ್ತಿರುವ ಅನ್ನ ಸಂತರ್ಪಣೆ ಕಾರ್ಯಕ್ರಮ ಮಂಗಳವಾರದಂದು ಕಡೆಯ ದಿನ ಯಶಸ್ವಿಯಾಗಿ, ನಾಲ್ಕು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.

  ಅನ್ನಪೂರ್ಣೇಶ್ವರಿ ಸೇವಾ ಸಮಿತಿಯ ಅನ್ನ ಸಂತರ್ಪಣೆ ಯ ಪುಣ್ಯತಮ ಕಾರ್ಯಕ್ಕೆ ಸ್ಥಳದಾನ ನೀಡಿ ಹಾರೈಸಿದ “ಶ್ರೀ ಸುರೇಶ ಬೀಳಗಿ” ಯವರನ್ನು ಕೃತಜ್ಞತಾಪೂರ್ವಕವಾಗಿ ಗೌರವ ಸಲ್ಲಿಸಲಾಯಿತು.

  ಅನ್ನ ಸಂತರ್ಪಣೆಯ ಪ್ರಾರಂಭದಲ್ಲಿ ರುಚಿಕಟ್ಟಾದ ಊಟವನ್ನು ತಯಾರಿಸಿ, ಪಾಕಶಾಲೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಎಲ್ಲ ರೀತಿಯಲ್ಲಿ ಸಹಭಾಗಿತ್ವ ನೀಡಿದ ಸುಬ್ರಾಯ ಭಟ್ಟ ದೇವತೆಮನೆ ಹಾಗೂ ಸಹಾಯಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

  ಅನ್ನ ಸಂತರ್ಪಣೆಯ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೂ ಬಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ನಗುಮೊಗದ ಸೇವೆ ನೀಡಿದ “ಭಗವಾನ್ ಸತ್ಯಸಾಯಿ ಸೇವಾಸಮಿತಿ” ಯ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

  300x250 AD

  ಅನ್ನ ಸಂತರ್ಪಣೆ ಯ ಪ್ರಾರಂಭದ ದಿನದಂದು ಉದ್ಘಾಟನೆ ನೆರವೇರಿಸಿ ಹಾರೈಸಿ, ಶುಚಿತ್ವವನ್ನು ಕಾಪಾಡಿಕೊಂಡು ಕಾರ್ಯಕ್ರಮ ಮುಂದುವರೆಸಿ ಒಳ್ಳೆಯದಾಗಲಿ ಎಂದು ಶುಭಕೋರಿದ ಶಿರಸಿ ಎ ಸಿ ದೇವರಾಜ್ ಆರ್ ರವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಆಗಮಿಸಿದ “ಶಿರಸಿ ನಗರಸಭೆಯ ಉಪಾಧ್ಯಕ್ಷೆ ವೀಣಾ ವಿ ಶೆಟ್ಟಿ ಆಗಮಿಸಿ ಭಕ್ತಾದಿಗಳಿಗೆ ಊಟ ಬಡಿಸಿದರು.

  ಮಂಗಳವಾರದವರೆಗೂ ನಡೆದ ಅನ್ನ ಸಂತರ್ಪಣೆ ಕಾರ್ಯವನ್ನು ಮೆಚ್ಚಿ ಹಲವು ಸನ್ಮಿತ್ರರು ಧನಸಹಾಯ,ಅಕ್ಕಿ,ತರಕಾರಿ,ಇತರ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

  Share This
  300x250 AD
  300x250 AD
  300x250 AD
  Back to top