ಶಿರಸಿ: ಹಾಸ್ಯ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಲೇಖಕಿ, ಅಂಕಣಕಾರ್ತಿ ಭುವನೇಶ್ವರಿ ಹೆಗಡೆ ಅವರಿಗೆ ಮಂಗಳೂರಿನ ಜಾಗೃತ ಮಹಿಳಾ ವೇದಿಕೆ ನೀಡುವ ವೀರ ವನಿತೆ ಪ್ರಶಸ್ತಿ ಪ್ರಕಟವಾಗಿದೆ.
ಶಿರಸಿ ವಿಶ್ವಶಾಂತಿ ಸೇವಾ ಟ್ರಸ್ಟ ಅಧ್ಯಕ್ಷೆ, ಮೂಲತಃ ಸಿದ್ದಾಪುರ ತಾಲೂಕಿನ ಕತ್ರಗಾಲಿನ ಭುವನೇಶ್ವರಿ ಹೆಗಡೆ ಅವರು ಮಂಗಳೂರು ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವಾ ನಿವೃತ್ತರಾದವರು. ಈಗಾಗಲೇ ಸಾವಿರಾರು ಹಾಸ್ಯ ಲೇಖನ, ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ನಗೆಮುಗಳು ಸೇರಿದಂತೆ ಅನೇಕ ಕೃತಿಕೂಡ ಬರೆದಿದ್ದಾರೆ. ಬನಸಿರಿ ಇವರ ಕುರಿತು ಬಂದ ಅಭಿನಂದನಾ ಗ್ರಂಥವಾಗಿದೆ. ಮಾ.೨೭ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಭುವನೇಶ್ವರಿ ಹೆಗಡೆ ನೀಡಿದ ಕೊಡುಗೆ ಗಮನಿಸಿ ಈ ಪ್ರಶಸ್ತಿ ಪ್ರದಾನ ಆಗಲಿದೆ.
ವೀರ ವನಿತೆ ಪ್ರಶಸ್ತಿ ಪುರಸ್ಕೃತೆ ಭುವನೇಶ್ವರಿ ಹೆಗಡೆ ಅವರನ್ನು ವಿಶ್ವಶಾಂತಿ ಸೇವಾ ಟ್ರಸ್ಟ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಅಭಿನಂದಿಸಿದ್ದಾರೆ.