• first
  second
  third
  previous arrow
  next arrow
 • ಪ್ರತಿ ಮಹಿಳೆಯರು ಒಂದು ಉದ್ಯಮದಂತೆ ಅಭಿವೃದ್ಧಿ ಹೊಂದಬೇಕು; ಶಾಂತಿ ನಾಯಕ

  300x250 AD

  ಶಿರಸಿ:ಪ್ರತಿ ಮಹಿಳೆಯರು ಒಂದು ಉಧ್ಯಮದಂತೆ ಅಭಿವೃದ್ಧಿ ಹೊಂದಬೇಕು. ಪ್ರತಿ ಮನೆಯ ಸುತ್ತ ಇರುವ ಖಾಲಿ ಜಾಗದಲ್ಲಿ ವಿವಿಧ ಜಾತಿಯ ಆಹಾರ ಸಸ್ಯಗಳನ್ನು ಬೆಳೆದು, ಇಂದಿನ ಯುವಜನರಿಗೆ ಅಧ್ಯಯನ ಯೋಗ್ಯ ಸ್ಥಳವಾಗಿಸಿ ಅದರ ಮೌಲ್ಯ ವರ್ದನೆ ಮಾಡಿ ಮಾರುಕಟ್ಟೆ ಕಲ್ಪಿಸಿಕೊಟ್ಟರೆ ಆರ್ಥಿಕ ಸದೃಢತೆ ಉಂಟಾಗುತ್ತದೆ.

  ಮಹಿಳೆಯರು ಪುರುಷರಿಗೆ ಸಮಾನರೇ ಹೊರತು ಸ್ಪರ್ಧಿಗಳಲ್ಲ. ಗಂಡು ಮತ್ತು ಹೆಣ್ಣು ಸರಿಯಾಗಿ ನಡೆದಾಗಲೇ ಜೀವನರಥ ಸರಿಯಾಗಿ ಸಾಗಲು ಸಾಧ್ಯ ಎಂದು ಲೇಖಕಿ ಡಾ.ಶಾಂತಿ ನಾಯಕ, ಹೊನ್ನಾವರ ಅಭಿಪ್ರಾಯಪಟ್ಟರು.

  ಅವರು ಇತ್ತೀಚೆಗೆ ವಾನಳ್ಳಿಯ ಜಾಜಿಗುಡ್ಡೆಯ ತವರುಮನೆ ಅಂಗಳದಲ್ಲಿ ನಡೆದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಡವಿ ಆಹಾರ ತಯಾರಿಕೆ ಸಂಸ್ಕರಣೆ, ವೈವಿಧ್ಯತೆ, ಮೌಲ್ಯವರ್ಧನೆ ಮತ್ತು ಸಹಭಾಗಿತ್ವ ಕುರಿತು ನಡೆದ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ನರವೇರಿಸಿ ಮಾತನಾಡುತ್ತಿದ್ದರು.

  ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸತೀಶ ಹೆಗಡೆ ಪಾಲ್ಗೊಂಡು ಇಂದು ಅಡವಿಯಲ್ಲಿರುವ ಎಷ್ಟೋ ಸಸ್ಯಗಳು ನಮಗೆ ಗುರುತಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಕಾಲಕಾಲಕ್ಕೆ ಅಡವಿಯಲ್ಲಿ ಆಗುವ ಹಣ್ಣುಗಳು ಮತ್ತು ಸಿಗುವ ಗಡ್ಡೆಗೆಣಸು ಹಾಗೂ ಅನೇಕ ಜಾತಿಯ ಸೊಪ್ಪುಗಳಿಂದ ನಮ್ಮ ಹಿರಿಯರು ಆಹಾರ ತಯಾರಿಸುತ್ತಿದ್ದರು. ಇದರಿಂದ ಆರೋಗ್ಯ ಕಾಪಾಡುವ ಜೊತೆಗೆ ಖರ್ಚುಗಳು ಸಹ ಕಡಿಮೆಯಾಗುತ್ತದೆ. ಇವುಗಳ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಕಲ್ಪಿಸಿದರೆ, ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ಉಂಟಾಗುತ್ತದೆ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಲು ತಾವು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದರು.

  ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖೆ, ಸಮೃದ್ಧಿ ಪ್ರತಿಷ್ಠಾನ(ರಿ) ದಾಸನಕೊಪ್ಪ, ಸದ್ಭಾವನಾ ಸೇವಾ ಸಂಸ್ಥೆ(ರಿ) ಶಿರಸಿ, ಲೈಫ್ ಟೃಸ್ಟ್, ಶಿರಸಿ ಹಾಗೂ ಇನ್ನಿತರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸಂಯುಕ್ತವಾಗಿ ಸಂಘಟಿಸಿದ್ದವು.

  ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾ.ಪಂ.ಸದಸ್ಯರಾದ ಎಸ್.ಕೆ.ಹೆಗಡೆ ವಹಿಸಿದ್ದರು. ಆರಂಭದಲ್ಲಿ ಪರಿಸರ ತಜ್ಞರಾದ ನರಸಿಂಹ ಹೆಗಡೆ ಪ್ರಾಸ್ತಾವಿಕ ಮಾತನಾಡಿ ನಮ್ಮ ಸುತ್ತಮುತ್ತ ಲಭ್ಯವಿರುವ ಆಹಾರಕ್ಕೆ ಬಳಸುವ ಅಡವಿ ಸಸ್ಯಗಳನ್ನು ಗುರುತಿಸಿ ಅವುಗಳ ನರ್ಸರಿ ಮಾಡಿ ಎಲ್ಲಾ ರೈತರ ತೋಟದ ಪಟ್ಟಿ ಮತ್ತು ಮನೆಯ ಹಿತ್ತಲುಗಳಲ್ಲಿ ಬೆಳೆದು ಪೂರೈಸಿದರೆ, ಪರ್ಣ ಕಂಪನಿಯಿಂದ ಮಾರುಕಟೆ ಕಲ್ಪಿಸಿಕೊಡುವುದಾಗಿ ತಿಳಿಸಿದರು.

  300x250 AD

  ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಡಾ.ಬಿ.ಎಸ್.ಸೋಮಶೇಖರ್ ಇವರು ನಾವು ಹಬ್ಬಹರಿದಿನಗಳಲ್ಲಿ ಬಳಸುವ ವಿವಿಧ ಜಾತಿಯ ಸೊಪ್ಪು ತರಕಾರಿಗಳ ಔಷದಿಯ ಗುಣಗಳನ್ನು ಚಿತ್ರ ಸಹಿತ ವಿವರಣೆ ನೀಡಿದರು.

  ಡಾ.ರವಿಕಿರಣ ಪಟವರ್ಧನ ಇವರು ಮಾತನಾಡಿ ನಾವು ಪ್ರತಿನಿತ್ಯ ಬಳಸುವ ಸೊಪ್ಪು ಬೇಳೆಕಾಳು ಹಾಗೂ ದೇವರಿಗೆ ಸಮರ್ಪಿಸುವ ಫಲಪುಷ್ಪ ಮತ್ತು ಪತ್ರೆಗಳಲ್ಲಿಯ ಔಷದೀಯ ಗುಣಗಳನ್ನು ಹಾಗೂ ಅವುಗಳನ್ನು ಬಳಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
  ಕಾರ್ಯಾಗಾರದಲ್ಲಿ 20 ಕ್ಕೂ ಹೆಚ್ಚು ಅಡವಿ ಸೊಪ್ಪುಗಳಿಂದ ಆಹಾರ ತಯಾರಿಸುವುದು ಹಾಗೂ ಜೊಯಿಡಾದಿಂದ ತಂದ ವಿವಿಧ ಜಾತಿಯ ಕೆಸುವಿನ ಗಡ್ಡೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡರು. ನಂತರ ಸಂಗೀತ ಸಂಜೆ ನಡೆಯಿತು.

  ತವರುಮನೆಯ ಪಿ.ಜಿ.ಹೆಗಡೆ ದಂಪತಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಆತ್ಮೀಯ ಆದರಾತಿಥ್ಯ ನೀಡಿದರು.

  ಕಾರ್ಯಕ್ರಮದಲ್ಲಿ ಜಿ.ವಿ.ಹೆಗಡೆ ಓಣಿಕೇರಿ, ಜಯಪುತ್ರ ಎಲ್.ಜಿ, ಬಾಲಚಂದ್ರ ಸಾಯಿಮನೆ, ಡಾ| ಎಸ್.ಜಿ.ಹೆಗಡೆ ವಾನಳ್ಳಿ ಮುಂತಾದವರು ಉಪಸ್ಥಿತರಿದ್ದರು. ಕವಿತಾ ಹೆಗಡೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

  Share This
  300x250 AD
  300x250 AD
  300x250 AD
  Back to top