• first
  second
  third
  previous arrow
  next arrow
 • ಭಾರತವನ್ನು ಪ್ರತಿನಿಧಿಸಲಿರುವ ಲಯನ್ಸ ಶಾಲೆಯ ಪ್ರೇರಣಾ ಶೇಟ್

  300x250 AD

  ಶಿರಸಿ: ನಗರದ “ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಶೇಟ್ ಫ್ರಾನ್ಸ್ ನ ನಾರ್ಮಂಡಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕ್ರೀಡಾ ಸ್ಫರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

  ISಈ ಜಿಮ್ನಾಸಿಯೇಡ್‌ನ 19 ನೇ ಆವೃತ್ತಿ – ಸ್ಕೂಲ್ ಸಮ್ಮರ್ ಗೇಮ್ಸ್ 14 ರಿಂದ 22 ಮೇ 2022 ರವರೆಗೆ ನಡೆಯುತ್ತಿದೆ. 70 ದೇಶಗಳ 16 ರಿಂದ 18 ವರ್ಷ ವಯಸ್ಸಿನ 3500 ಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಒಟ್ಟುಗೂಡಿಸಲಿರುವ, ಈ ಕ್ರೀಡಾ ಸ್ಫರ್ಧೆಗಳಲ್ಲಿ 17 ಕ್ರೀಡೆಗಳು ಮತ್ತು 3 ಪ್ಯಾರಾ ಕ್ರೀಡೆಗಳ ವಿಭಾಗದಲ್ಲಿ ನಡೆಯಲಿವೆ.

  ಶಿರಸಿ ಲಯನ್ಸ ಶಾಲೆಯ ಪ್ರೇರಣಾ ಶೇಟ್ ಇಂತಹ ಪ್ರತಿಷ್ಠಿತ ಕ್ರೀಡಾ ಸ್ಫರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಶಿರಸಿಗೆ ಆ ಮೂಲಕ ಇಡೀ ಉತ್ತರಕನ್ನಡ ಜಿಲ್ಲೆಗೆ ಅಲ್ಲದೆ ಇದು ನಮ್ಮ ರಾಜ್ಯಕ್ಕೂ ಕೂಡ ಹೆಮ್ಮೆಯ ಕ್ಷಣ.

  300x250 AD

  ಪ್ರೇರಣಾಗೆ ಈ ಪಂದ್ಯದಲ್ಲಿ ಯಶಸ್ಸು ಸಿಗಲಿ. ಅವಳ ಕೀರ್ತಿ ದೇಶ ವಿದೇಶಗಳಲ್ಲೂ ಹರಡಲಿ ಎಂದು ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ , ಶಿರಸಿ ಲಯನ್ಸ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕೇತರ ಬಂಧುಗಳು ತುಂಬು ಹೃದಯದಿಂದ ಹಾರೈಸಿದ್ದಾರೆ. ಜೊತೆಗೆ ಶಾಲೆಯ ಈ ಹೆಮ್ಮಯ ಕುವರಿ ಪ್ರೇರಣಾ ಶೇಟ್ ಮತ್ತು ಅವಳ ಪಾಲಕರನ್ನು ಅಭಿನಂದಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top