ಶಿರಸಿ:ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಜಿಲ್ಲಾ ಆಡಳಿತ ಉತ್ತರಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಓಜೋನ್ ದಿನಾಚರಣೆ 2021ರ ಪ್ರಯುಕ್ತ ಉತ್ತರಕನ್ನಡ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಗರದ ‘ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ’ಯ 10ನೇ ತರಗತಿಯ ವಿದ್ಯಾರ್ಥಿ
ಧನುಷ್ ಭಾಗ್ವರ್ ಭಾಗವಹಿಸಿದ್ದು “ಓಜೋನ್ ಪದರದ ಬಳಕೆಯ ಪರಿಣಾಮ” ಎಂಬ ವಿಷಯದ ಮೇಲೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕೇತರ ಬಂಧುಗಳು ತುಂಬು ಹೃದಯದಿಂದ ಶುಭ ಹಾರೈಸಿ ಜೊತೆಗೆ ಸಾಧಕ ವಿದ್ಯಾರ್ಥಿ ಮತ್ತು ಪಾಲಕರನ್ನು ಅಭಿನಂದಿಸಿದ್ದಾರೆ.